News Karnataka Kannada
Friday, May 10 2024
ಬೆಂಗಳೂರು

ಬೆಂಗಳೂರು ಪೊಲೀಸರಿಂದ ನೂತನ ವಾಟ್ಸ್ಆ್ಯಪ್ ಸೇವೆ ಆರಂಭ

whatsapp
Photo Credit : Wikipedia

ಬೆಂಗಳೂರು: ನಗರ ಪೊಲೀಸರು ವಾಟ್ಸ್ಆ್ಯಪ್​ನಲ್ಲಿ ಸಹಾಯಕ್ಕೆ ಸ್ಪಂದಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಈ ಮುನ್ನ ಇದ್ದ 112 ಸಹಾಯವಾಣಿ ಸೇವೆಯನ್ನು ಈ ಹೊಸ ಸೇವೆಯ ಜೊತೆ ಜೋಡಿಸಲಾಗಿದೆ. ಈ ಮುನ್ನ ವಾಟ್ಸ್ಆ್ಯಪ್ ಮೂಲಕ ಪೊಲೀಸ್ ಕಂಪ್ಲೇಂಟ್ ನೀಡುವ ಸೇವೆ ಇತ್ತು. ಆದರೆ ಇದೀಗ ಅದೇ ಸೇವೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ವಾಟ್ಸ್ಆ್ಯಪ್ ಮೂಲಕ ನೀಡಿದ ಮಾಹಿತಿಗೆ ಸ್ಪಂದಿಸುವ ಸೇವೆ ಆರಂಭಿಸಲಾಗಿದೆ.

ನೀವು ಮಾಡಬೇಕಿರುವುದು ಇಷ್ಟೇ, 9480801000 ಈ ವಾಟ್ಸ್ಆ್ಯಪ್ ನಂಬರ್ ಅನ್ನು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸೇವ್ ಮಾಡಿಕೊಳ್ಳಿ. ಈ ಮುನ್ನ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ತಿಳಿಸಬಹುದಿತ್ತು, ಇದೀಗ ಆ ಸಂಖ್ಯೆಯ ಜೊತೆಗೆ ವಾಟ್ಸ್ಆ್ಯಪ್ ಮೂಲಕವೂ ಸಾರ್ವಜನಿಕರು ದೂರು ತಿಳಿಸಬಹುದಾಗಿದೆ.

ಸಹಾಯವಾಣಿ ಸಂಖ್ಯೆ 112 ಕ್ಕೆ ಈಗಲು ಸಹ ಕರೆ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ. ಜೊತೆಗೆ ಈ ವಾಟ್ಸ್​ಆ್ಯಪ್ ಸಂಖ್ಯೆಗೂ ದೂರು ನೀಡಬಹುದಾಗಿದೆ. ಈ ಹೊಸ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು