ಬೆಂಗಳೂರು: ಜೂನ್ 1ರಿಂದಲೇ ಗ್ಯಾರಂಟಿ ಯೋಜನೆ ಜಾರಿ ?

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜಾರಿಗೆ ಸಿಎಂ ಸಿದ್ದರಾಮಯ್ಯ ಎಲ್ಲಾ ಸಾಧಕ ಬಾಧಕಗಳನ್ನು ಚರ್ಚೆ ಮಾಡಿದ್ದಾರೆ. ನಾಳೆ ಸಚಿವರ ಜೊತೆ ಸಮಾಲೋಚನೆ ನಡೆಯಲಿದ್ದು ಜೂನ್ 1ರಿಂದಲೇ 5 ಗ್ಯಾರಂಟಿ ಜಾರಿ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಮೇ 29ರಂದು ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ಶಕ್ತಿಭವನದಲ್ಲಿ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ಸಾರಿಗೆ, ಆಹಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೌಶಲ್ಯಾಭಿವೃದ್ಧಿ, ಇಂಧನ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಯಾವ ಗ್ಯಾರಂಟಿ ಯೋಜನೆ ಜಾರಿಗೆ ಎಷ್ಟು ಹಣ ಖರ್ಚಾಗುತ್ತದೆ? ಫಲಾನುಭವಿಗಳ ಸಂಖ್ಯೆ ಎಷ್ಟು? ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಷರತ್ತುಗಳೊಂದಿಗೆ ಬಿಪಿಎಲ್‌ ಕುಟುಂಬದವರಿಗೆ ಗೃಹಲಕ್ಷ್ಮೀ ಗ್ಯಾರಂಟಿ ನೀಡುವ ಸಾಧ್ಯತೆ ಇದೆ. ಆದರೆ ರಾಜ್ಯದ ಪ್ರತೀ ಮನೆಯೊಡತಿಗೆ 2000 ರೂ. ನೀಡುವುದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್, ಸದ್ಯ ಮಾತು ಉಳಿಸಿಕೊಳ್ಳಬೇಕಾದ ಒತ್ತಡದಲ್ಲಂತೂ ಇದೆ.

Umesha HS

Recent Posts

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಏ.28 ರಂದು “ಆಟಿಸಂ ಜಾಗೃತಿ”ಕುರಿತು ಎಕ್ಷಪ್ಸನಲ್ ಕಾರ್ಯಕ್ರಮ

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗೂ ಸ್ಪೇಷಲ್‌ ಪೇರೆಂಟ್ಸ್‌ ಸಪೋರ್ಟ್‌ ಗ್ರೂಪ್‌ ಅವರ ಸಹಯೋಗದೊಂದಿಗೆ Aibha association…

5 hours ago

ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ : ಎಸ್‌ಐಟಿ ತನಿಖೆ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ…

5 hours ago

ಒಂದೇ ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಧಾನಿ ಮೋದಿ, ಪ್ರಿಯಾಂಕ ಅಬ್ಬರ

ಮೇ 7ರಂದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ ಇಂದು ಬೆಳಗಾವಿಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ…

6 hours ago

ಮೆಂಟಲ್ ಸೂರಿ ಹತ್ಯೆ ಕೇಸ್‌ : ಮೃತನ ಮಗನೂ ಸೇರಿ ಮೂವರ ಬಂಧನ

ಜಿಲ್ಲೆಯಲ್ಲಿ ಮನೆ ಕಳ್ಳತನ, ದರೋಡೆ ಕಿಂಗ್‌ ಎನಿಸಿಕೊಂಡಿದ್ದ ಸುರೇಶ್ ಅಲಿಯಾಸ್ ಮೆಂಟಲ್ ಸೂರಿ(45)ಯನ್ನ ಶಿವಮೊಗ್ಗ ಬಾಪೂಜಿನಗರದ 7ನೇ ಕ್ರಾಸ್ ನಲ್ಲಿರುವ…

6 hours ago

ಹಿಂದು ಹುಡುಗಿಗೆ ಅಶ್ಲೀಲ ಮೆಸೇಜ್‌ ರವಾನೆ : ಮುಸ್ಲಿಂ ಯುವಕನಿಗೆ ಬಿತ್ತು ಧರ್ಮದೇಟು

17 ವರ್ಷದ ಅಪ್ರಾಪ್ತೆಗೆ ಮುಸ್ಲಿಂ ಯುವಕನೋರ್ವ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದನ್ನು ರೆಡ್‌ ಹ್ಯಾಂಡ್‌ ಹಿಡಿದ ಸ್ಥಳೀಯರು ಆತನಿಗೆ ತಕ್ಕ ಶಾಸ್ತಿ…

7 hours ago

ಅಕ್ರಮ ಜಾನುವಾರು ಸಾಗಾಟ: 9 ಆರೋಪಿಗಳು ಪೊಲೀಸರ ವಶಕ್ಕೆ

ಕೊಪ್ಪಳ ಜಿಲ್ಲೆಯ ಗಿಣಿಗೇರಾದಿಂದ 16 ಎತ್ತುಗಳನ್ನು ಆರೋಪಿಗಳು ಖರೀದಿಸಿ. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಗಂಗಾವತಿ…

7 hours ago