ಬೆಂಗಳೂರು: ಮುಜರಾಯಿ ದೇವಳಗಳಿಗೆ ಬರುವ ಹಾಲುಣಿಸುವ ತಾಯಂದಿರ ಅನುಕೂಲಕ್ಕಾಗಿ ದೇವಳಗಳಲ್ಲಿ ಹಾಲುಣಿಸಲು ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ಶಕ್ತಿ ಯೋಜನೆಯಿಂದ ಪ್ರವಾಸಿ ತಾಣಗಳಿಗೆ, ದೇವಸ್ಥಾನಗಳಿಗೆ ಬರುವ ಜನರ ಸಂಖ್ಯೆ ಹೆಚ್ಚಿದೆ. ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ಬರುವ ಹಾಲುಣಿಸುವ ತಾಯಂದಿರ ಅನುಕೂಲಕ್ಕಾಗಿ ದೇವಾಲಯಗಳಲ್ಲಿ ಹಾಲುಣಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಅಲ್ಲದೆ ‘ಧರ್ಮ‘ ಎಂದರೆ ಮನುಷ್ಯನಿಗೆ ಅಧ್ಯಾತ್ಮಿಕ ಅನುಭೂತಿ ನೀಡುವ ಮಾರ್ಗ ಮಾತ್ರ. ಆಧ್ಯಾತ್ಮಿಕ ಅನುಭೂತಿಯನ್ನು ನೀಡುವ ದೇವಾಲಯಗಳಲ್ಲಿ ಸ್ವಚ್ಛತೆ, ಪ್ರಶಾಂತತೆ ಇರಬೇಕಾಗುತ್ತದೆ.
ಮುಜರಾಯಿ ಇಲಾಖೆಯ ದೇವಾಲಯಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟು ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ನಮ್ಮ ಸರ್ಕಾರ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಶಕ್ತಿ ಯೋಜನೆಯಿಂದ ಪ್ರವಾಸಿ ತಾಣಗಳಿಗೆ, ದೇವಸ್ಥಾನಗಳಿಗೆ ಬರುವ ಜನರ ಸಂಖ್ಯೆ ಹೆಚ್ಚಿದೆ.
ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ಬರುವ ಹಾಲುಣಿಸುವ ತಾಯಂದಿರ ಅನುಕೂಲಕ್ಕಾಗಿ ದೇವಾಲಯಗಳಲ್ಲಿ ಹಾಲುಣಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಸಚಿವ @RLR_BTM ಅವರ ನೇತೃತ್ವದಲ್ಲಿ ಮುಜರಾಯಿ ಇಲಾಖೆ ಹಲವು ಜನಸ್ನೇಹಿ… pic.twitter.com/dZP02IirQ5
— Karnataka Congress (@INCKarnataka) September 14, 2023