ಬೆಂಗಳೂರು: ಬಸ್ನಲ್ಲಿ ಚಿಲ್ಲರೆಗಾಗಿ ಪರದಾಡುತ್ತಿದ್ದ ಪ್ರಯಾಣಿಕರಿಗೆ ಮತ್ತು ಕಂಡಕ್ಟರ್ಗಳಿಗೆ ಸಿಹಿ ಸುದ್ದಿ. ಇನ್ಮುಂದೆ ಬಿಎಂಟಿಸಿ ಬಸ್ ನಲ್ಲಿ ಕ್ಯೂಆರ್ ಕೋಡ್ ಸೌಲಭ್ಯ ಇಲ್ಲದೇ. ಇತ್ತೀಚೆಗೆ ಕಿಸೆಯಲ್ಲಿ ಹಣ ಇಡೋದಕ್ಕಿಂತ ಮೊಬೈಲ್ ಮೂಲಕ ಹಣದ ವ್ಯವಹಾರ ಮಾಡುವುದು ಸಾಮಾನ್ಯವಾಗಿದೆ.
ಬಿಎಂಟಿಸಿ ಬಸ್ ತೆರುಳುವಾಗ ಚಿಲ್ಲರೆಗಾಗಿ ಕಂಡಕ್ಟರ್ಗಳ ಜೊತೆ ಉಗಿಸಿಕೊಳ್ಳೊದು ಅಭ್ಯಾಸವಾಗಿತ್ತು. ಆದರೆ ಈಗ ಎಂಟಿಸಿಯಲ್ಲಿ ಕ್ಯೂಆರ್ (QR Code) ಸರ್ವಿಸ್ ಇದ್ದು ಪ್ರಯಾಣಿಕರು ಸ್ಕ್ಯಾನ್ ಮಾಡಿ ಹಣ ಪಾವತಿಸುತ್ತಿದ್ದಾರೆ. ಹಾಗಾಗಿ ಯುಪಿಐ ಪೇಮೆಂಟ್ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಎಂಟಿಸಿ ಬಸ್ನಲ್ಲಿ ನಿತ್ಯ 35 ಲಕ್ಷಕ್ಕೂ ಅಧಿಕ ಜನ ಸಂಚರಿಸ್ತಿದ್ದಾರೆ.
ಈ ಫೈಕಿ 20 ಲಕ್ಷ ಮಹಿಳೆಯರು ನಿತ್ಯ ಉಚಿತವಾಗಿ ಸಂಚರಿಸಿದ್ರೆ. ಉಳಿದ 15 ಲಕ್ಷ ಜನ ಹಣ ಕೊಟ್ಟು ಟಿಕೆಟ್ ಪಡೆದು ಓಡಾಡ್ತಿದ್ದಾರೆ. ಇದರಲ್ಲಿ 1ಲಕ್ಷ ಪ್ರಯಾಣಿಕರು ಯುಪಿಐ ಮೂಲಕ ಹಣ ನೀಡಿ ಟಿಕೆಟ್ ಪಡೆದುಕೊಂಡಿದ್ದಾರೆ. ಸದ್ಯ ಈ ಅನುಕೂಲಕರ ಸೌಲಭ್ಯಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.