News Karnataka Kannada
Monday, April 29 2024
ಬೆಂಗಳೂರು ನಗರ

ಲೋಕಸಭಾ ಚುನಾವಣೆ: ಮಾಧ್ಯಮದವರಿಗೆ ಅಂಚೆ ಮತದಾನ ವ್ಯವಸ್ಥೆ

ಭಾರತದ ಚುನಾವಣಾ ಆಯೋಗವು ಯಾವ ಮತದಾರರೂ ಮತದಾನದಿಂದ ವಂಚಿತರಾಗದಿರುವಂತೆ ಹಲವು ಕ್ರಮಗಳನ್ನು ವಹಿಸಿದೆ. ಅದರಂತೆ ಪ್ರಸಕ್ತ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಮತದಾನದ ದಿನದಂದು ಅತ್ಯಗತ್ಯ ಸೇವೆಯಲ್ಲಿ ನಿಯೋಜಿತರಾದ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ಗೈರು ಹಾಜರಿ ಅಗತ್ಯ ಸೇವೆಯಡಿ ವರ್ಗದವರಿಗೆ ಅಂಚೆ ಮತಪತ್ರ ಸೌಲಭ್ಯ ಒದಗಿಸುತ್ತಿವೆ.
Photo Credit : By Author

ಬೆಂಗಳೂರು: ಭಾರತದ ಚುನಾವಣಾ ಆಯೋಗವು ಯಾವ ಮತದಾರರೂ ಮತದಾನದಿಂದ ವಂಚಿತರಾಗದಿರುವಂತೆ ಹಲವು ಕ್ರಮಗಳನ್ನು ವಹಿಸಿದೆ. ಅದರಂತೆ ಪ್ರಸಕ್ತ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಮತದಾನದ ದಿನದಂದು ಅತ್ಯಗತ್ಯ ಸೇವೆಯಲ್ಲಿ ನಿಯೋಜಿತರಾದ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ಗೈರು ಹಾಜರಿ ಅಗತ್ಯ ಸೇವೆಯಡಿ ವರ್ಗದವರಿಗೆ ಅಂಚೆ ಮತಪತ್ರ ಸೌಲಭ್ಯ ಒದಗಿಸುತ್ತಿವೆ.

ಈ ಯೋಜನೆಯಡಿ 12 ಸೇವೆಗಳನ್ನು ಅತ್ಯಗತ್ಯ ಸೇವೆ ಎಂದು ಗುರುತಿಸಿದ್ದು, ಅದರಲ್ಲಿ ಮತದಾನದ ದಿನದಂದು ವರದಿಗಾರಿಕೆ ಮಾಡುವ ಭಾರತ ಚುನಾವಣಾ ಆಯೋಗ ಅನುಮೋದಿತ ಮಾಧ್ಯಮದವರನ್ನು ಅತ್ಯಗತ್ಯ ಸೇವೆಗಳಲ್ಲಿ ನಿಯೋಜಿತರಾದ ಮತದಾರರು ಎಂದು ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಮತದಾನದ ದಿನದಂದು ತಮ್ಮ ಮತ ಕ್ಷೇತ್ರದಲ್ಲಿ ಮತದಾನ ಮಾಡಲು ಸಾಧ್ಯವಾಗದೇ ಕರ್ತವ್ಯದಲ್ಲಿ ನಿಯೋಜಿತರಾದ ಭಾರತ ಚುನಾವಣಾ ಆಯೋಗ ಅನುಮೋದಿತ ಮಾಧ್ಯಮದವರು ಮತದಾನದ ದಿನಕ್ಕೆ ಮುಂಚಿತವಾಗಿ ತಮ್ಮ ಮತ ಕ್ಷೇತ್ರದಲ್ಲಿ ಗೈರು ಹಾಜರಿ ಮತದಾರ ಹೆಸರಿನಲ್ಲಿ ಅಂಚೆ ಮತದಾನ ಮಾಡಲು ಅವಕಾಶವಿದ್ದು, ಇದನ್ನು ನಮೂನೆ 12-ಡಿ ಭರ್ತಿ ಮಾಡುವ ಮೂಲಕ ಮತ ಚಲಾಯಿಸಬಹುದಾಗಿದೆ.

ದಿನಾಂಕ:19-03-2024 ರಿಂದ 21-03-2024 ರೊಳಗೆ ಭಾರತ ಚುನಾವಣಾ ಆಯೋಗ ಅನುಮೋದಿತ ಮಾಧ್ಯಮದವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಯ ಸಹಾಯಕ ನಿರ್ದೇಶಕರಾದ ಡಾ. ಕೆ.ಎನ್. ಕವನ ಅವರಿಂದ ಕಚೇರಿ ಅವಧಿಯಲ್ಲಿ ನಮೂನೆ 12-ಡಿ ಅನ್ನು ಪಡೆದು, ಭರ್ತಿ ಮಾಡಿದ ನಮೂನೆಯನ್ನು ದಿನಾಂಕ: 21-03-2024ರ ಸಂಜೆ 5.30 ಗಂಟೆ ಒಳಗಾಗಿ ಸಲ್ಲಿಸಲು ತಿಳಿಸಿದೆ.

ಸಂಬಂಧಿಸಿದ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಅಡಕವಿರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳಾದ ಡಾ. ಕೆ.ಎನ್. ಕವನ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೊಬೈಲ್ ದೂರವಾಣಿ ಸಂಖ್ಯೆ – 94808 41250, ಅವರನ್ನು ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು