News Karnataka Kannada
Sunday, April 28 2024
ಸಂಪಾದಕರ ಆಯ್ಕೆ

ಕುಶಲಕರ್ಮಿಗಳಿಗೆ ಆನ್ ಲೈನ್ ವ್ಯವಹಾರ, ಗ್ರಾಮೀಣ ಆರ್ಥಿಕತೆ ಪ್ರೋತ್ಸಾಹ

Online sales to local artisans, weavers go up
Photo Credit : News Kannada

ಬೆಂಗಳೂರು, ಮೇ.25: ಭಾರತೀಯ ಕುಶಲಕರ್ಮಿಗಳು ಮತ್ತು ನೇಕಾರರು ತಮ್ಮ ಸಾಂಪ್ರದಾಯಿಕ ಕಲೆ ಮತ್ತು ಜೀವನೋಪಾಯವನ್ನು ಕಾಪಾಡಿಕೊಳ್ಳಲು ಭಾರೀ ಹೋರಾಟವನ್ನು ನಡೆಸುತ್ತಿದ್ದಾರೆ. ಸದ್ಯಕ್ಕೆ ತಾವು ಉತ್ಪಾದಿಸಿದ ವಸ್ತುಗಳ ಮಾರಾಟದಲ್ಲಿ ಭಾರೀ ಏರಿಕೆ ಕಾಣುತ್ತಿರುವುದಕ್ಕೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಋಣಿಯಾಗಿದ್ದಾರೆ.

ಉದಾಹರಣೆಗೆ, ನಶಿಸುತ್ತಿರುವ ಕರಕುಶಲ ಕಲೆಯನ್ನು ಜೀವಂತವಾಗಿ ಇರಿಸಲು ಡಿಜಿಟಲ್‌ನ ಶಕ್ತಿಯನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಸ್ಥಳೀಯ ಮಾರಾಟಗಾರ ಅದಿಲ್.  ಶತಮಾನದಿಂದ ಚನ್ನಪಟ್ಟಣ ಆಟಿಕೆಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಆನ್‌ಲೈನ್‌ ವ್ಯಾಪಾರದಲ್ಲಿ ಅವರಿಗೆ ಹೆಚ್ಚಿನ ಲಾಭವಾಗುತ್ತಿದೆ.

“ನನ್ನೊಂದಿಗೆ ಸುಮಾರು 35 ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ಕೆಲವರು 40 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರೆ. ಇನ್ನೂ ಕೆಲವರು 60 ವರ್ಷ ವಯಸ್ಸಿನವರಾಗಿದ್ದಾರೆ,’ ಎಂದು ಅವರು ಹೇಳುತ್ತಾರೆ.

“ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಈ ಕುಶಲಕರ್ಮಿಗಳಿಗೆ ಜೀವನೋಪಾಯದ ಪ್ರಮುಖ ಮೂಲವಾಗಿವೆ. ಈ ಸೌಲಭ್ಯಗಳು ನನ್ನ ತಂದೆ ಮತ್ತು ತಾತನಿಗೆ ಇರಲಿಲ್ಲ. ಆದರೆ ಇಂದು ನಾನು ಕಡಿಮೆ ಹೂಡಿಕೆಯೊಂದಿಗೆ ಖರೀದಿದಾರರ ಜತೆಗೆ ತೊಡಗಿಸಿಕೊಳ್ಳಲು ಮತ್ತು ದೊಡ್ಡ ಪರಿಣಾಮ ರೂಪಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಶಕ್ತಿಯನ್ನು ಬಳಸಿಕೊಳ್ಳಬಹುದು. ನಮ್ಮ ಭವ್ಯವಾದ ಕರಕುಶಲ ಪರಂಪರೆ ಸಂರಕ್ಷಿಸುವ ಜೊತೆಗೆ ವ್ಯಾಪಾರವನ್ನು ಹೆಚ್ಚಿಸಲು ಮತ್ತು ಈ ವಿಶಿಷ್ಟ ಚನ್ನಪಟ್ಟಣದ ಆಟಿಕೆಗಳನ್ನು ಭಾರತದಿಂದ ಜಗತ್ತಿಗೆ ಲಭ್ಯವಾಗುವಂತೆ ಮಾಡಲು ನಾನು ಬಯಸುತ್ತೇನೆ,” ಎಂದು ಅವರು ಹೇಳುತ್ತಾರೆ.

ಆಂಧ್ರಪ್ರದೇಶ ಮೂಲದ ಆದಿಲಕ್ಷ್ಮಿ ಟಾಯ್ಸ್‌ನ ಮಾಲೀಕ ಅಡವಿ ಶ್ರೀನಿವಾಸ್ ಅವರಿಗೆ ತಮ್ಮ ಉದ್ಯಮಶೀಲತೆಯ ಕನಸನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮ ಮತ್ತು ಜಿಯೋಮಾರ್ಟ್ ಸೇರಿದಂತೆ ಹೊಸ ವಿತರಣೆ ಚಾನೆಲ್‌ಗಳತ್ತ ಮುಖ ಮಾಡಿದ್ದಾರೆ. ಜಿಯೋಮಾರ್ಟ್‌ನ ಕ್ರಾಫ್ಟ್ಸ್ ಮೇಳಗಳಂತಹ ಆನ್‌ಲೈನ್ ಮಳಿಗೆಗಳಿಂದ ಕುಶಲಕರ್ಮಿಗಳು ಮತ್ತು ಶ್ರೀನಿವಾಸ್ ಅವರಂಥ ಉದ್ಯಮಿಗಳಿಗೆ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ದೇಶಾದ್ಯಂತದ ಹೊಸ ಗ್ರಾಹಕರಿಗೆ ತಲುಪಿಸಲು ಸಹಾಯ ಮಾಡುತ್ತವೆ.

ಅದೇ ರೀತಿ, ತಮಿಳುನಾಡು ರಾಜ್ಯದ ಈರೋಡ್‌ನ ಲಾವಣ್ಯಾ   ದರ್ಭಾಯಿ ಮತ್ತು ಸಾಂಬು ನದಿ ಹುಲ್ಲಿನಿಂದ ನೇಯ್ದ ಯೋಗ ಮತ್ತು ಧ್ಯಾನ ಮ್ಯಾಟ್‌ಗಳನ್ನು ಮಾರಾಟ ಮಾಡುವ ಉದ್ದೇಶಕ್ಕೆ ಆನ್‌ಲೈನ್‌ ಅಂಗಡಿ ತೆರೆದಿದ್ದಾರೆ.

“ಸಾಂಕ್ರಾಮಿಕ ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ ನನ್ನ ಹಳ್ಳಿಯ ಜನರು ಇತರ ನಗರಗಳಿಂದ ಮರಳಿದರು,” ಎಂದು 17 ವರ್ಷಗಳ ಕೆಲಸದ ಅನುಭವ ಹೊಂದಿರುವ ಸಾಫ್ಟ್‌ವೇರ್ ಇಂಜಿನಿಯರ್ ಲಾವಣ್ಯಾ ಹೇಳುತ್ತಾರೆ. ಅವರ ಮೂರನೇ ತಲೆಮಾರಿನ ವ್ಯವಹಾರವನ್ನು ಮುಂದುವರಿಸಲು ತಮ್ಮ  ಕೆಲಸವನ್ನು ತೊರೆದಿದ್ದಾರೆ. “ಪುರುಷ ಮತ್ತು ಸ್ತ್ರೀ ಕುಶಲಕರ್ಮಿಗಳಿಗೆ ಕೈಮಗ್ಗದ ಟವೆಲ್ ಮತ್ತು ಯೋಗ ಹಾಗೂ ಧ್ಯಾನ ಮ್ಯಾಟ್‌ಗಳನ್ನು ನೇಯಲು ತರಬೇತಿ ನೀಡಲು ಆರಂಭಿಸಿದೆ. ಇದು ಗ್ರಾಮೀಣರ ಜೀವನಕ್ಕೆ ಹೆಚ್ಚಿನ ಸಹಾಯ ಒದಗಿಸಿತು ಎಂದು ಹೇಳುತ್ತಾರೆ.

ಪ್ರಬಲವಾದ ವ್ಯಾಪಾರವನ್ನು ರೂಪಿಸುವುದಕ್ಕೆ ತನ್ನ ಹಳ್ಳಿಯಲ್ಲಿ ನೇಕಾರರ ಜೀವನೋಪಾಯವನ್ನು ಬೆಂಬಲಿಸಲು ಮತ್ತು ತನ್ನ ಸಮುದಾಯದ ಇತರ ಮಹಿಳೆಯರಿಗೆ ಮಾದರಿಯಾಗಿ, ಲಾವಣ್ಯಾ ತನ್ನದೇ ಆದ ವೆಬ್‌ಸೈಟ್ ಅನ್ನು ಪ್ರಾರಂಭಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಶುರು ಮಾಡಿದರು.

“ನಾನು ಜಿಯೋಮಾರ್ಟ್‌ನಂತಹ ಆನ್‌ಲೈನ್ ಮಾರ್ಕೆಟ್ ಪ್ಲೇಸ್ ಗಳಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೇನೆ, ಅಲ್ಲಿ ಇತ್ತೀಚೆಗೆ ನನ್ನ ಉತ್ಪನ್ನಗಳನ್ನು ಲಿಸ್ಟ್ ಮಾಡಿದ್ದೇನೆ ಮತ್ತು ಆರ್ಡರ್‌ಗಳನ್ನು ಪಡೆಯಲು ಪ್ರಾರಂಭಿಸಿದ್ದೇನೆ,” ಎಂದು ಅವರು ಹೇಳುತ್ತಾರೆ.

2019 ರಲ್ಲಿ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿ ಆದಿಲಕ್ಷ್ಮಿ ಟಾಯ್ಸ್ ಪ್ರಾರಂಭಿಸಲು 18 ವರ್ಷಗಳ ಕೆಲಸವನ್ನು ತೊರೆದ ಇನ್ನೊಬ್ಬ ಮಾರಾಟಗಾರ ಶ್ರೀನಿವಾಸ್ ಕೂಡ ಡಿಜಿಟಲ್ ವಿತರಣಾ ಚಾನೆಲ್‌ಗಳನ್ನು ಅನುಸರಿಸುವ ಮೂಲಕ ಫೇಸ್‌ಬುಕ್ ಜಾಹೀರಾತುಗಳತ್ತ ಹೊರಳಿದರು ಮತ್ತು ದೃಢವಾದ ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ರೂಪಿಸುವ ಮೂಲಕ ಹೆಚ್ಚಿನ ಮಾರಾಟವನ್ನು ಮಾಡುತ್ತಿದ್ದಾರೆ.

“ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಡಿಜಿಟಲೈಸೇಷನ್ ಬಗ್ಗೆ ಸ್ವಲ್ಪವೇ ತಿಳಿದಿದೆ. ಅವರ ಕಲೆಯನ್ನು ಮುನ್ನೆಲೆಗೆ ತರುವುದು ಮತ್ತು ಅವರನ್ನು ಬೆಂಬಲಿಸುವುದು ಬಹಳ ಮುಖ್ಯ. ವಿಷಕಾರಿಯಲ್ಲದ, ಬಾಳಿಕೆ ಬರುವ ಮತ್ತು ಸುಸ್ಥಿರವಾಗಿರುವ ಮರದ ಆಟಿಕೆಗಳನ್ನು ಉತ್ತೇಜಿಸುವುದು ನಮ್ಮ ಗುರಿಯಾಗಿದೆ,” ಎಂದು ಜಿಯೋಮಾರ್ಟ್‌ನ ಮಾರಾಟಗಾರ ಶ್ರೀನಿವಾಸ್ ಹೇಳುತ್ತಾರೆ.

ಹಲವಾರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಹೆಚ್ಚುತ್ತಿರುವ ಆರ್ಡರ್‌ಗಳನ್ನು ಪಡೆಯುವುದರ ಹೊರತಾಗಿ, ಅವರು ಸದ್ಯಕ್ಕೆ ಆಟಿಕೆಗಳನ್ನು ರಫ್ತು ಮಾಡುತ್ತಿದ್ದಾರೆ. ಇನ್ನೂ ಕುತೂಹಲಕಾರಿ ಅಂಶ ಏನೆಂದರೆ, ಅವರ ಗ್ರಾಹಕರಲ್ಲಿ ಹೆಚ್ಚಿನವರು 40ರಿಂದ 50 ವರ್ಷ ವಯಸ್ಸಿನವರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು