ಬೆಂಗಳೂರು: ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಅಪಾರ್ಟ್ಮೆಂಟ್ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಾಲಕಿ ಮಾನ್ಯ ಸಾವು ಪ್ರಕರಣ ಇದೀಗ ಎಚ್ಚೆತ್ತುಕೊಂಡಿದೆ.
ಇದೀಗ ಅಪಾರ್ಟ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ 7 ಜನರ ಬಂಧನ ಮಾಡಲಾಗಿದೆ. ತಂದೆ ರಾಜೇಶ್ ದೂರು ಆಧರಿಸಿ ಎಲೆಕ್ಟ್ರಿಕಲ್ ವಿಂಗ್ ಟೀಂ, ಸ್ವಿಮ್ಮಿಂಗ್ ಪೂಲ್ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು, ಪ್ರೆಸ್ಟೀಜ್ ಹೋಮ್ ಓನರ್ ಅಸೋಸಿಯೇಷನ್ ಅಧ್ಯಕ್ಷ ದಬಾಶಿಶ್ವಸಿನ್ಹಾ, ಸಿಬ್ಬಂದಿಯಾದ ಜಾವೇದ್ ಸಫೀಕ್, ಸಂತೋಷ್ ಮಹಾರಾಣಾ, ಬಿಕಾಸ್ ಕುಮಾರ್, ಭಕ್ತ ಚರಣ್ ಪ್ರಧಾನ್, ಸುರೇಶ್, ಗೋವಿಂದ್ ಮಂಡಲ್ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ: ಅಪಾರ್ಟ್ಮೆಂಟ್ ಒಂದರಲ್ಲಿ ಬಾಲಕಿ ಮಾನ್ಯ ಸ್ವಿಮ್ಮಿಂಗ್ ಪೂಲ್ಗೆ ಇಳಿದಾಗ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಳು. ಬಾಲಕಿ ಜೋರಾಗಿ ಕಿರುಚಿಕೊಂಡಾಗ ಅಲ್ಲಿದ್ದವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.