ಫ್ರೀ ಪವರ್ ಎಫೆಕ್ಟ್: ವಿದ್ಯುತ್ ಒಲೆ ಖರೀದಿಗೆ ಮುಂದಾದ ಜನ

ಬೆಂಗಳೂರು: ಕರ್ನಾಟಕದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಐದು ಗ್ಯಾರಂಟಿಗಳ ಘೋಷಣೆಯಾಗಿದೆ. ಅದರಲ್ಲಿ ೨೦೦ ಯೂನಿಟ್ ತನಕ ಉಚಿತ ವಿದ್ಯುತ್ ಕೂಡ ಒಂದು. ಈ ಘೋಷಣೆಯನ್ನು ಸರಕಾರ ಇನ್ನೂ ಅಧಿಕೃತವಾಗಿ ಜಾರಿಗೊಳಿಸಿಲ್ಲ. ಈ ಬೆನ್ನಲ್ಲೇ ದುಬಾರಿ ಎಲ್‌ಪಿಜಿ ಸಿಲಿಂಡರ್‌ ಗೆ ಗುಡ್ ಬೈ ಹೇಳುತ್ತಿರುವ ಹಳ್ಳಿ ಜನರು ಇದೀಗ ವಿದ್ಯುತ್ ಒಲೆ ಖರೀದಿಗೆ ಮುಂದಾಗಿದ್ದಾರೆ.

1125 ರೂ. ಕೊಟ್ಟು ಗ್ಯಾಸ್ ಸಿಲಿಂಡರ್ ಖರೀದಿಸುವುದಕ್ಕಿಂತ ಉಚಿತ ವಿದ್ಯುತ್ ಸಿಕ್ಕರೆ ಅಡುಗೆ ವೆಚ್ಚ ಇಳಿಯಬಹುದು ಅನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿಯ ಜನ ವಿದ್ಯುತ್ ಒಲೆಗಳ ಮೊರೆ ಹೋಗಿದ್ದಾರೆ. ತಾತ್ವಿಕ ಒಪ್ಪಿಗೆ ಬೆನ್ನಲ್ಲೇ ಇಂತಹ ಬೆಳವಣಿಗೆ ನಡೆದಿರುವುದು ವಿಶೇಷ. ಮಹಿಳೆಯರು ಈಗ ವಿದ್ಯುತ್ ಒಲೆ ಖರೀದಿಸುತ್ತಿರುವುದರಿಂದ ವಿದ್ಯುತ್ ಒಲೆಯ ಮಾರಾಟದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡು ಬಂದಿದೆ ಎಂದು ತಿಳಿದು ಬಂದಿದೆ.

Gayathri SG

Recent Posts

ಪ್ರಜ್ವಲ್‌ ರೇವಣ್ಣ ಕೇಸಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸಂಗಿಲ್ಲ; ಕೋರ್ಟ್ ತಡೆಯಾಜ್ಞೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣ ಹಾಗೂ ಎಚ್.ಡಿ. ರೇವಣ್ಣ ವಿರುದ್ಧದ ಅಪಹರಣ…

39 seconds ago

108 ಸೇವೆಯ ಸಿಬ್ಬಂದಿಗಳ ಬಾಕಿ ಇರುವ 3 ತಿಂಗಳ ವೇತನ ತಕ್ಷಣ ಪಾವತಿ ಮಾಡಿ: ಯಶ್ ಪಾಲ್ ಸುವರ್ಣ

ಕಳೆದ 3 ತಿಂಗಳಿನಿಂದ ಸರ್ಕಾರ 108 ಸೇವೆಯ ಸಿಬ್ಬಂದಿಗಳಿಗೆ ವೇತನ ನೀಡದೇ ಚೆಲ್ಲಾಟವಾಡುತ್ತಿದ್ದು, ಇದೀಗ ಇಂದು ರಾತ್ರಿಯಿಂದ ಸಿಬ್ಬಂದಿಗಳು ಬಂದ್…

11 mins ago

ದಿನೇದಿನೇ ಹೆಚ್ಚುತ್ತಿರುವ ಬಿಸಿಲು, ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯನಿರತ ಅಧಿಕಾರಿ ಸಾವು

ಚುನಾವಣಾ ಕರ್ತವ್ಯ ನಿರತ ಸಹಾಯಕ ಕೃಷಿ ಅಧಿಕಾರಿ ಆನಂದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಚಿಟಗುಪ್ಪ ತಾಲೂಕಿನ ಕೋಡಂಬಲ್ ಚೆಕ್‌ಪೋಸ್ಟ್‌ನಲ್ಲಿ…

13 mins ago

ಕಾಂಗ್ರೆಸ್‌ ದೇಶ ವಿರೋಧಿ ಪಕ್ಷಗಳೊಂದಿಗೆ ಕೈ ಜೋಡಿಸಿದೆ: ಜೆ.ಪಿ.ನಡ್ಡಾ

ಕಾಂಗ್ರೆಸ್‌ ಪಕ್ಷ  ರಾಮ ವಿರೋಧಿ, ಸನಾತನ ಧರ್ಮ ವಿರೋಧಿಯಾಗಿದೆ.  ದೇಶ ವಿರೋಧಿ ಪಕ್ಷಗಳೊಂದಿಗೆ ಕೈ ಜೋಡಿಸಿದೆ ಎಂದು ಬಿಜೆಪಿ ರಾಷ್ಟ್ರೀಯ…

32 mins ago

ಹೃದಯಾಘಾತದಿಂದ ಚುನಾವಣಾ ಸಿಬ್ಬಂದಿ ಸಾವು

ಮುಧೋಳದಲ್ಲಿ ಚುನಾವಣಾ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ  ನಡೆದಿದೆ.

43 mins ago

ಇ.ಡಿ ಬಂಧನ : ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರಿದ ಹೇಮಂತ್ ಸೊರೆನ್

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಬಂಧನದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಜಾರ್ಖಂಡ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಜಾರ್ಖಂಡ್…

52 mins ago