ಬೆಂಗಳೂರು ನಗರ

ದಾನಿಗಳ ವೀರ್ಯದಿಂದ ಬಾಡಿಗೆ ತಾಯ್ತನಕ್ಕೆ ಕೋರ್ಟ್‌ ಸಮ್ಮತಿ

ಬೆಂಗಳೂರು: ಮಹತ್ವದ ನಿರ್ಧಾರವೊಂದರಲ್ಲಿ ದಾನಿಗಳ ವೀರ್ಯ ಪಡೆದು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡು ಮಕ್ಕಳನ್ನು ಹೊಂದಲು 13 ದಂಪತಿಗಳಿಗೆ ಮಂಗಳವಾರ ಕರ್ನಾಟಕ ಹೈಕೋರ್ಟ್ ಅವಕಾಶ ಕಲ್ಪಿಸಿದೆ.

2023ರ ಮಾರ್ಚ್ 14ರಿಂದ ಜಾರಿಗೆ ಬಂದಿರುವ ಬಾಡಿಗೆ ತಾಯ್ತನ ತಿದ್ದುಪಡಿ ನಿಯಮ 7 ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ‘ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ನೂತನ ತಿದ್ದುಪಡಿ ಪ್ರಕಾರ ದಾನಿಗಳ ವೀರ್ಯ ಪಡೆಯಲು ನಿರ್ಬಂಧವಿದೆ. ಆದರೆ, ಎಲ್ಲವನ್ನೂ ಏಕರೂಪದಲ್ಲಿ ಗಮನಿಸುವುದು ಸರಿಯಲ್ಲ. ಪ್ರತಿಯೊಂದನ್ನೂ ಆಯಾ ಪ್ರಕರಣಕ್ಕೆ ತಕ್ಕಂತೆ ಗಮನಿಸಿ, ನಿಯಮಗಳನ್ನು ಆಧರಿಸಿ ಸಡಿಲಗೊಳಿಸಬಹುದು’ ಎಂದು ಆದೇಶಿಸಿದೆ.

13 ದಂಪತಿಗಳು ಸಲ್ಲಿಸಿದ್ದ ಅರ್ಜಿಗಳ ಪ್ರಕಾರ, ಎಲ್ಲಾ ಹೆಂಡತಿಯರು ಆರೋಗ್ಯ ಸಮಸ್ಯೆಗಳಿಂದ ಗರ್ಭ ಧರಿಸಲು ಸಾಧ್ಯವಾಗಲಿರಲ್ಲ. ಈ ಪೈಕಿ ಒಂದು ಪ್ರಕರಣದಲ್ಲಿ ಒಬ್ಬರಿಗೆ ಹೃದಯದ ಕಾಯಿಲೆಯೂ ಸೇರಿದೆ ಎಂದು ತಿಳಿದುಬಂದಿದೆ. ಮಾರ್ಚ್ 14, 2023 ರಂದು, ಕೇಂದ್ರ ಸರ್ಕಾರವು ಬಾಡಿಗೆ ತಾಯ್ತನದ ನಿಯಮಗಳ ಫಾರ್ಮ್ ಸಂಖ್ಯೆ 2 ರ ಷರತ್ತು (1)(ಡಿ) ಅನ್ನು ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಹೊರಡಿಸಿತ್ತು.

Gayathri SG

Recent Posts

ಈಜಲು ಹೋಗಿ‌ದ್ದ ಮೂವರು ನೀರುಪಾಲು: 5 ಜನ ಪ್ರಾಣಾಪಾಯದಿಂದ ಪಾರು

ಈಜಲು ಹೋಗಿ‌ದ್ದ ಮೂವರು ನೀರುಪಾಲಾಗಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ.

22 mins ago

“ಪಟ್ಲ ಸಂಭ್ರಮ” ಯಶಸ್ವಿಗೊಳಿಸಲು ಪಟ್ಲ ಸತೀಶ್ ಶೆಟ್ಟಿ ಕರೆ

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ "ಪಟ್ಲ ಸಂಭ್ರಮ" ನಮ್ಮೆಲ್ಲರ ಮನೆಯ ಕಾರ್ಯಕ್ರಮ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಟ್ಲ…

32 mins ago

ಮಂಗಳೂರು: ಕರ್ತವ್ಯದಲ್ಲಿದ್ದ ವಾಹನದ ಬಗ್ಗೆ ಸುಳ್ಳು ಸಂದೇಶ ರವಾನಿಸಿದ ಸಾರ್ವಜನಿಕ

ಕಳೆದ ದಿನ (ಮೇ 16) ಸಂಜೆ ಮಂಗಳೂರು ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಕೆಎ-19-ಜಿ-1023 ನೊಂದಣೆ ಸಂಖ್ಯೆಯ ಹೆದ್ದಾರಿ ಗಸ್ತು…

37 mins ago

ಹೊಸ ರುಚಿ: ಅವಲಕ್ಕಿ ಹುಳಿ ಮಾಡುವುದು ಹೇಗೆ?

ಗಡಿಬಿಡಿಯ ಜೀವನದಲ್ಲಿ ಬೆಳಗ್ಗಿನ ಉಪಹಾರ ಮಾಡಿಕೊಂಡು ಆಫೀಸಿಗೆ ಹೋಗುವುದೇ ಸವಾಲ್. ಇಂತಹ  ಸಂದರ್ಭದಲ್ಲಿ ಅವಲಕ್ಕಿ ಇದ್ದರೆ ಅದರಿಂದ ಹುಳಿ ತಯಾರಿಸಿ…

44 mins ago

ಬಾವಿಗೆ ಬಿದ್ದ ಮಗುವನ್ನು ರಕ್ಷಿಸಿದ ಯುವಕನಿಗೆ ಮೆಚ್ಚುಗೆಯ ಸುರಿಮಳೆ

ಸರಪಾಡಿಯ ಹಂಚಿಕಟ್ಟೆಯಲ್ಲಿ ಬಾವಿಗೆ ಬಿದ್ದ ಮಗುವೊಂದನ್ನು ತನ್ನ ಪ್ರಾಣದ ಹಂಗನ್ನು ತೊರೆದು ತುಂಡಾಗುವ ಸ್ಥಿತಿಯಲ್ಲಿದ್ದ ಹಳೆಯ ಹಗ್ಗವನ್ನು ಬಳಸಿ ಮೇಲಕ್ಕೆತ್ತಿದ…

54 mins ago

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು

ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ, ಶ್ರೀರಾಮ ಸೇನೆಯ ಅಧ್ಯಕ್ಷ ಸಿದ್ದಲಿಂಗ ಶ್ರೀಗಳ ವಿರುದ್ಧ ಕಲಬುಗಿಯಲ್ಲಿ ಜಾತಿ…

58 mins ago