ಕೂಪನ್‌ ಕಾರ್ಡ್‌ ವಿತರಿಸಿ ಚುನಾವಣೆ ಗೆಲುವು: ಕುಮಾರಸ್ವಾಮಿ ಆರೋಪಕ್ಕೆ ಕಾಂಗ್ರೆಸ್‌ ದಿವ್ಯ ಮೌನ

ಬೆಂಗಳೂರು: ಮಾಲ್‌ಗಳಲ್ಲಿ ಖರೀದಿಗೆ ಬಳಸಬಹುದಾದ 5,000 ರೂ ವಿಶೇಷ ಕಾರ್ಡ್‌ಗಳನ್ನು ಅಕ್ರಮವಾಗಿ ವಿತರಿಸುವ ಮೂಲಕ ಕರ್ನಾಟಕದಲ್ಲಿ ಚುನಾವಣೆ ಗೆದ್ದಿದೆ ಎಂಬ ಎಚ್‌.ಡಿ ಕುಮಾರಸ್ವಾಮಿ ಆರೋಪದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಮೌನವಾಗಿದೆ.

45 ರಿಂದ 50 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇಂತಹ ಕಾರ್ಡ್‌ ವಿತರಿಸಿ ಚುನಾವಣೆ ಗೆದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದರು. ಅಲ್ಲದೆ ಈ ಸಂಬಂಧ ದಾಖಲೆಗಳಾಗಿ ಕಾರ್ಡ್‌ಗಳನ್ನು ಪ್ರದರ್ಶನ ಮಾಡಿದ್ದರು. ಆದರೆ ಈ ಬಗ್ಗೆ ಕಾಂಗ್ರೆಸ್‌ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದೆ.

ಚುನಾವಣೆಗೆ ಕೆಲವು ಗಂಟೆಗಳ ಮೊದಲು ಯೋಜಿತ ರೀತಿಯಲ್ಲಿ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದರು . ಕಾರ್ಡ್‌ಗಳು ಕ್ಯೂಆರ್ ಕೋಡ್‌ಗಳನ್ನು ಹೊಂದಿದ್ದು, ಇದು ಗಂಭೀರ ಚುನಾವಣಾ ಅಕ್ರಮವಾಗಿದೆ. ರಾಮನಗರ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಇದೇ ಕಾರಣ ಎಂದು ಹೇಳಿದ್ದರು.

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಮಾತ್ರ ಎನ್ ಕ್ಯಾಶ್ ಆಗುವ ರೀತಿಯಲ್ಲಿ ಕಾರ್ಡ್ ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದೊಂದು ದೊಡ್ಡ ಹಗರಣ. ಎಲ್ಲಾ 45 ರಿಂದ 50 ವಿಧಾನಸಭಾ ಸ್ಥಾನಗಳಲ್ಲಿ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 60,000 ಇಂತಹ ಕೂಪನ್‌ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದ್ದರು.

Gayathri SG

Recent Posts

ವಿವಾದಾತ್ಮಕ ಹೇಳಿಕೆ : ಶಾಸಕ ರಾಜು ಕಾಗೆಗೆ ಚುನಾವಣಾ ಇಲಾಖೆ ನೋಟಿಸ್‌

ವಿವಾದಾತ್ಮಕ ಹೇಳಿಕೆ ಹಿನ್ನಲೆ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆಗೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿನ್ನೆ(ಏ.30) ಪ್ರಿಯಾಂಕಾ ಜಾರಕಿಹೊಳಿ‌…

6 hours ago

ಕಾರ್ತಿಕ್​ ಜಯರಾಮ್​ ಹುಟ್ಟುಹಬ್ಬ ಪ್ರಯುಕ್ತ ‘ದಿ ವೀರ್​’​ ಪೋಸ್ಟರ್ ಔಟ್‌

ಸ್ಯಾಂಡಲ್​ವುಡ್​ನ ಖ್ಯಾತ ನಟ ಕಾರ್ತಿಕ್​ ಜಯರಾಮ್​ ಅಲಿಯಾಸ್​ ಜೆಕೆ ಅವರು ಇಂದು (ಮೇ 1) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

6 hours ago

ಕೊಳೆತ ಸ್ಥತಿಯಲ್ಲಿ ಮಹಿಳೆ ಮೃತ ದೇಹ ಪತ್ತೆ

ಮಹಿಳೆಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಮೃತದೇಹ ಗುರುತು ಪತ್ತೆಯಾಗದಂತೆ ಬೆಂಕಿ ಹಚ್ಚಿ ಅರಣ್ಯದಲ್ಲಿ ಹಾಕಿ ಹೋಗಿರುವ ಪ್ರಕರಣ ತಾಲ್ಲೂಕಿನ ತೂಬಗೆರೆ…

7 hours ago

ವಿಜಯ ಸಂಕಲ್ಪ ಸಮಾವೇಶಕ್ಕೆ ಆಗಮಿಸಿದ ಅಮೀತ್ ಶಾಗೆ ಅದ್ದೂರಿ ಸ್ವಾಗತ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪರವಾಗಿ ಪ್ರಚಾರಕ್ಕೆ ಬಂದ ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ಅವರು ವಿಜಯ…

7 hours ago

ಫಾಲ್ಕೆ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರಶಸ್ತಿ ಪಡೆದ ‘ಕೆಂಡ’ ನಿರ್ದೇಶಕ ಸಹದೇವ್ ಕೆಲವಡಿ

ಕೆಂಡ’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾರಿ ಸದ್ದು ಮಾಡುತ್ತಿದ್ದೆ. ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಸಹದೇವ್ ಕೆಲವಡಿ ಅವರಿಗೆ ಸಿನಿಮಾ…

7 hours ago

ಕಾಂಗ್ರೆಸ್ ಶಾಸಕನದ್ದು ಎನ್ನಲಾದ ಮತ್ತೊಂದು ಅಶ್ಲೀಲವಿಡಿಯೋ ವೈರಲ್‌

ಹಾಸನದ ಅಶ್ಲೀಲ ವಿಡಿಯೋ ಪ್ರಕರಣ ಬೆನ್ನಲ್ಲೇ ಇದೀಗ ಮತ್ತೊರ್ವ ಶಾಸಕನ ವಿಡಿಯೋ ವೈರಲ್‌ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಶಾಸಕರದ್ದು ಎನ್ನಲಾದ…

8 hours ago