ಬೆಂಗಳೂರು, ಜ.1: ಕಟ್ಟಡದಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕಾಮಾಕ್ಷಿಪಾಳ್ಯದ ಕೊಟ್ಟಿಗೆಪಾಳ್ಯದಲ್ಲಿ ನಡೆದಿದೆ.
ಮೃತ ಯುವಕನನ್ನ ಒರಿಸ್ಸಾ ಮೂಲದ ಬಾಪಿ (30) ಎಂದು ಗುರುತಿಸಲಾಗಿದೆ. ಹೊಸ ವರ್ಷದ ಪಾರ್ಟಿ ವೇಳೆ ಕುಡಿದು ಮೂರನೇ ಪ್ಲೋರ್ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಈತ ನಗರದ ಕಾಟನ್ ಬಾಕ್ಸ್ ತಯಾರಿ ಮಾಡುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.