ಬೆಂಗಳೂರು: ಕನ್ನಡ ಪರ ಸಂಘಟನೆಗಳು ನಾಳೆ ಸೆಪ್ಟೆಂಬರ್ 29 ಶುಕ್ರವಾರ ಕರೆ ನೀಡಿರುವ ಕರ್ನಾಟಕ ಬಂದ್ ಕರೆಗೆ ರಾಜ್ಯಾದ್ಯಂತ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ಬಂದ್ನಲ್ಲಿ ಪಾಲ್ಗೊಳ್ಳಲು ಹಲವು ಸಂಘಟನೆಗಳು ಮುಂದೆ ಬಂದು ಬೆಂಬಲ ಸೂಚಿಸಿವೆ. ರಾಜ್ಯದ ನಾನಾ ಭಾಗಗಳಲ್ಲಿರುವ ಸ್ಥಳೀಯ ಸಂಘಟನೆಗಳು ಕೂಡಾ ಕೈಜೋಡಿಸಿವೆ. ಇದರಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಯಶಸ್ವಿಯಾಗುವ ಲಕ್ಷಣಗಳು ಕಾಣುತ್ತಿವೆ.
ಕರ್ನಾಟಕ ಬಂದ್ಗೆ ನೈತಿಕ ಬೆಂಬಲ ನೀಡಲು ಶಾಲೆಗಳು ಮುಂದಾಗಿದೆ. ಶಾಲೆಗಳಿಗೆ ರಜೆ ನೀಡುವ ಜವಬ್ದಾರಿಯನ್ನು ಆಯಾ ಆಡಳಿತ ಮಂಡಳಿ ತಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಶಾಲೆಗಳ ರಜೆ ನೀಡುವ ಬಗ್ಗೆ ನಿರ್ಧಾರಕ್ಕೆ ಮನವಿ ನೀಡಲಾಗಿದೆ ಎಂದು ರೂಪ್ಸಾ ಖಾಸಗಿ ಶಾಲೆಗಳ ಸಂಘಟನೆಯ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿದ್ದಾರೆ.
ಏನಿರುತ್ತೆ?
ಆಸ್ಪತ್ರೆಗಳು
ಔಷಧಿ ಮಳಿಗೆಗಳು
ಅಂಬುಲೆನ್ಸ್ ಸಂಚಾರ
ಬ್ಯಾಂಕ್ಗಳು
ದಿನಪತ್ರಿಕೆಗಳು
ಮೆಟ್ರೊ, ರೈಲು
ಏನಿರಲ್ಲ?
ಖಾಸಗಿ ಬಸ್ಗಳು
ಶಾಲಾ ವಾಹನಗಳು
ಜಿಲ್ಲಾ ಕೇಂದ್ರದ ಪ್ರಮುಖ ಮಾರುಕಟ್ಟೆ
ಕೆಲ ಖಾಸಗಿ ಶಾಲೆಗಳು
ಗೂಡ್ಸ್ ಸಾಗಣೆ ವಾಹನಗಳು
ಕೈಗಾರಿಕೆಗಳು
ಅಭರಣ ಮಳಿಗೆಗಳು
ಚಿತ್ರಮಂದಿರಗಳು
ಸೇವೆ ಅನುಮಾನ
ಬಿಎಂಟಿಸಿ ಬಸ್
ಕೆಎಸ್ ಆರ್ಟಿಸಿ ಬಸ್ಗಳು
ಹೋಟೆಲ್ಗಳು
ಸರ್ಕಾರಿ ಕಚೇರಿಗಳು
ಐಟಿ-ಬಿಟಿ ಕಂಪನಿಗಳು