ಬೆಂಗಳೂರು: ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಪೂರ್ವ ಬೆಂಗಳೂರಿನ ಅನೇಕ ಶಾಲೆಗಳು ಸೋಮವಾರ ಬೆಳಿಗ್ಗೆ ಮಕ್ಕಳಿಗೆ ರಜೆ ಘೋಷಿಸಿವೆ. ಮಾರತ್ತಹಳ್ಳಿ, ಎಚ್ ಎಎಲ್, ಇಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ರಸ್ತೆಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ.
ಶಾಲೆಗಳಿಂದ ಪೋಷಕರಿಗೆ ಕಳುಹಿಸಲಾದ ಮುಂಜಾನೆಯ ಸಂದೇಶಗಳ ಪ್ರಕಾರ, ಶಾಲಾ ಬಸ್ಸುಗಳು ನೀರು ತುಂಬಿದ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಿಲ್ಲದ ಕಾರಣ, ರಜಾದಿನವನ್ನು ಘೋಷಿಸಲಾಗಿದೆ.
ಭಾನುವಾರ ರಾತ್ರಿ 10 ಗಂಟೆಯ ನಂತರ ಸೋಮವಾರ ಮುಂಜಾನೆಯವರೆಗೆ, ದಕ್ಷಿಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಆಸ್ತಿಪಾಸ್ತಿಗಳು ಮತ್ತು ಬೆಳೆದು ನಿಂತಿರುವ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ.
ಐಎಂಡಿ ಅಧಿಕಾರಿಗಳು ಇನ್ನೂ ನಾಲ್ಕು ದಿನಗಳ ಕಾಲ ಮಳೆಯ ಎಚ್ಚರಿಕೆ ನೀಡಿದರು, ಇದು ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಸಾಧ್ಯತೆಯಿದೆ.