ಬೆಂಗಳೂರು: ಭಾರೀ ಮಳೆಯಿಂದ ನದಿಯಂತೆ ತುಂಬಿ ಹರಿಯುತ್ತಿವೆ!

ಬೆಂಗಳೂರು: ಮಳೆಯ ಅಬ್ಬರದಿಂದ ಬೆಂಗಳೂರಿನ ರಸ್ತೆಗಳಲ್ಲಿ ಮಳೆನೀರು ನದಿಯಂತೆ ತುಂಬಿ ಹರಿಯುತ್ತಿವೆ. ಸಾವಿರಾರು ವಾಹನಗಳು ನೀರಿನಲ್ಲಿ ಮುಳುಗಿವೆ. ಬೆಂಗಳೂರಿನ ಬೆಳ್ಳಂದೂರು, ಸರ್ಜಾಪುರ, ವೈಟ್​ಫೀಲ್ಡ್​ ರಸ್ತೆಗಳು ಪ್ರವಾಹದ ನೀರಿನಿಂದ ಆವೃತವಾಗಿವೆ. ಬೆಂಗಳೂರು ಅಕ್ಷರಶಃ ಕೆರೆಯಂತಾಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿಯ ದಿನವಾದ ಇಂದು ಭಾರೀ ಮಳೆಯಾಗಲಿದ್ದು, ಸೆ. 2ರವರೆಗೂ ಮಳೆ ಮುಂದುವರೆಯಲಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮುಂದಿನ 3 ದಿನಗಳ ಕಾಲ ಕರ್ನಾಟಕದಲ್ಲಿ ನಿರಂತರ ಮಳೆಯಾಗಲಿದ್ದು, ಬೆಳಗಾವಿ, ಗದಗ, ಬೆಂಗಳೂರು, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.

ಕಳೆದ ಎರಡು ದಿನಗಳಿಂದ ಅನೇಕ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ಭಾರೀ ಮಳೆಯಿಂದಾಗಿ ರಜೆ ಘೋಷಿಸಲಾಗಿದೆ.

Sneha Gowda

Recent Posts

ಎಚ್‌.ಡಿ.ರೇವಣ್ಣ ಇಂದು ಜೈಲಿನಿಂದ ಬಿಡುಗಡೆ; ಸಂತಸ ಪಡುವ ಸಮಯವಲ್ಲ ಎಂದ ಹೆಚ್‌ಡಿಕೆ

ಮಹಿಳೆಯ ಅಪಹರಣ ಪ್ರಕರಣದಲ್ಲಿ ಕಳೆದ ದಿನ ಜಾಮೀನು ಪಡೆದಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ನ್ಯಾಯಾಂಗ ಬಂಧನದಿಂದ ಇಂದು ಬಿಡುಗಡೆಯಾಗಲಿದ್ದಾರೆ.

8 mins ago

ಲಂಚ ಪಡೆದ ಜಿಎಸ್ ಟಿ ಅಧಿಕಾರಿಗೆ : 3 ವರ್ಷ ಜೈಲು, 5ಲಕ್ಷ ದಂಡ

ಜಿಎಟಿ ಅಧಿಕಾರಿಯೊಬ್ಬರು ಲಂಚ ಪಡೆದ ಪ್ರಕರಣಕ್ಕೆ ಸಂಬಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ 3 ವರ್ಷ ಜೈಲು, 5ಲಕ್ಷ ದಂಡವನ್ನು ವಿಧಿಸಿದೆ.

15 mins ago

ಮದುವೆಯಾದ ಒಂದು ವಾರದಲ್ಲಿಯೇ ಮದುಮಗಳು ಮೃತ್ಯು

ಮದುವೆಯಾದ ಒಂದು ವಾರದಲ್ಲಿ ಮದುಮಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ದ್ವಾರಕಪುರಿಯಲ್ಲಿ ನಡೆದಿದೆ ಎಂದು ಇಂದೋರ್​ನ ಪೊಲೀಸರು ಮಾಹಿತಿ ನೀಡಿದ್ದಾರೆ.

26 mins ago

ಭಾರಿ ಪ್ರವಾಹ : ಮೃತರ ಸಂಖ್ಯೆ 50ಕ್ಕೆ ಏರಿಕೆ, 27 ಮಂದಿ ನಾಪತ್ತೆ

ಪಶ್ಚಿಮ ಇಂಡೋನೇಷ್ಯದಲ್ಲಿ ಸಂಭವಿಸಿದ ಜ್ವಾಲಮುಖಿ ಸ್ಪೋಟದಿಂದ ಉಂಟಾದ ಪ್ರವಾಹ ಮತ್ತು ಶೀತ ಲಾವ ಹರಿವಿನಿಂದ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿದೆ.…

33 mins ago

ಚಾಲಕನ ನಿಯಂತ್ರಣ ತಪ್ಪಿ ಟ್ರಕ್‌ಗೆ ಕಾರು ಡಿಕ್ಕಿ : 6 ಜನ ಮೃತ್ಯು

ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನ ಮೃತಪಟ್ಟಿರುವ ಘಟನೆ ಬ್ರಜ್‌ಘಾಟ್ ಟೋಲ್ ಪ್ಲಾಜಾ ಬಳಿ ನಡೆದಿದೆ ಎಂದು…

43 mins ago

ಲೊಕಸಾಭಾ ಚುನಾವಣೆ : ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

ಇಂದು ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಕಾಲಭೈರವನ ದರ್ಶನ ಪಡೆದು ಬಳಿಕ…

57 mins ago