ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಬಿಬಿಎಂಪಿ ಕರೆ

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದ್ದು, ಈ ಹಬ್ಬವನ್ನು ಪ್ರಾಣಿ-ಪಕ್ಷಿಗಳಿಗೂ ತೊಂದರೆಯಾಗದಂತೆ, ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂದು ಬಿಬಿಎಂಪಿ ತಿಳಿಸಿದೆ. ಈ ಹಿನ್ನೆಲೆ, ಶಬ್ದಮಾಲಿನ್ಯ, ವಾಯು ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಸಿಡಿಸಬಾರದು. ಹಸಿರು ಪಟಾಕಿಯನ್ನೇ ಬಳಸಬೇಕು. ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಹಚ್ಚಲು ಅವಕಾಶ ಎಂದು ಬಿಬಿಎಂಪಿ ಹೇಳಿದೆ.

ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಸರಳ ರೀತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗೂ ಮಾಲಿನ್ಯರಹಿತವಾಗಿ ಆಚರಿಸಬೇಕು ಎಂದು ‘ಸ್ವಚ್ಚ ದೀಪಾವಳಿ- ಶುಭ ದೀಪಾವಳಿ’ ಅಭಿಯಾನ ಆರಂಭಿಸಿದೆ.

ಸುಪ್ರೀಂ ಕೋರ್ಟ್‌ ಆದೇಶ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನದಂತೆ, ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಬೇಕು. ಪಟಾಕಿಗಳ ಪ್ಯಾಕೆಟ್‌ಗಳ ಮೇಲೆ ಹಸಿರು ಚಿನ್ಹೆಯನ್ನು ಖಚಿತಪಡಿಕೊಳ್ಳಬೇಕು. ಕ್ಯೂಆರ್ ಕೋಡ್ ಮೂಲಕ ಪಟಾಕಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹಸಿರು ಪಟಾಕಿಯನ್ನು ಮಾತ್ರ ಬಳಸಬೇಕು. ಈ ಬಗ್ಗೆ ಘನತ್ಯಾಜ್ಯ ವಿಭಾಗದ ಆಟೊ ಟಿಪ್ಪರ್‌ಗಳಲ್ಲಿ ಧ್ವನಿವರ್ಧಕಗಳ ಮೂಲಕ ಸಂದೇಶ ಪ್ರಚಾರ ಮಾಡಿ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಕೇಂದ್ರ ಸರ್ಕಾರ ‘ಸ್ವಚ್ಛ ಭಾರತ’ ಯೋಜನೆ 2.0 ಅಡಿಯಲ್ಲಿ ‘ಸ್ವಚ್ಛ ದೀಪಾವಳಿ- ಶುಭ ದೀಪಾವಳಿ’ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಾರ್ವಜನಿಕರು ‘My Gov Portal’ ನಲ್ಲಿ ಅಥವಾ ವೆಬ್ ಲಿಂಕ್ (https://pledge.mygov.in/swachh-diwali-shubh-diwali/) ನೋಂದಾಯಿಸಿಕೊಂಡು ಅಭಿಯಾನಕ್ಕೆ ಕೈ ಜೋಡಿಸಬೇಕು. ‘ಪರಿಸರ ಸ್ನೇಹಿ ಸ್ಥಳೀಯ ಉತ್ಪನ್ನಗಳನ್ನು ಬಳಸಲು ನಾನು ಬದ್ಧನಾಗಿದ್ದೇನೆ. ಏಕ ಬಳಕೆಯ ಪ್ಲಾಸ್ಟಿಕ್ ಬೇಡ. ಹಸಿರು ದೀಪಾವಳಿಯನ್ನು ಆಚರಿಸುತ್ತೇನೆ’ ಎಂದು ಪ್ರಮಾಣ ಮಾಡಬೇಕು’ ಎಂದು ಹೇಳಿದರು.

 

Gayathri SG

Recent Posts

ಪಂಜಾಬ್​​ ವಿರುದ್ಧ ಹೈದರಾಬಾದ್ ಜಯಬೇರಿ : ಪ್ಲೇ ಆಫ್​​ನಲ್ಲಿ ಆರ್​​ಸಿಬಿ ವಿರುದ್ಧ ಕಣಕ್ಕೆ

ಇಂದು ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪಂಜಾಬ್​​​ ಕಿಂಗ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ ಗೆದ್ದು…

15 mins ago

ಮಹಿಳೆಯ ಕಿಡ್ನಿಯಲ್ಲಿತ್ತು 300 ಕಲ್ಲು: ಬೆಚ್ಚಿಬಿದ್ದ ವೈದ್ಯರು

ವೈದ್ಯರು ಮಹಿಳೆಯೊಬ್ಬರ ಮೂತ್ರಪಿಂಡದಿಂದ 300 ಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆದುಹಾಕಿದ್ದಾರೆ. ದೇಹದಲ್ಲಿ ನೀರಿನಾಂಶ ಕಡಿಮೆಯಾಗದಿರಲು ನೀರಿನ ಬದಲು ಪ್ರತೀ ದಿನ…

29 mins ago

ಬಿಜೆಪಿ ಶಾಸಕ ಹರೀಶ್ ಪೂಂಜಾ ಮೇಲೆ ಎಫ್.ಐ.ಆರ್ ದಾಖಲು

ತನ್ನ ಬೆಂಬಲಿಗರ ಪರ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದ ಬಿಜೆಪಿ ಶಾಸಕ ಹರೀಶ್‌ ಪೂಂಜಾ  ಮೇಲೆ ಎಫ್‌ಐಆರ್‌ ದಾಖಲಾಗಿದೆ.ಶಾಸಕರು ತನ್ನ…

54 mins ago

ಬೈಕಿಗೆ ಡಿಕ್ಕಿ ಹೊಡೆದ ಕಾರು: ಓರ್ವ ಸಾವು

ಕಾರು ​​ ಚಾಲಕನೋರ್ವ ಕುಡಿದು ಅಡ್ಡಾದಿಡ್ಡಿ ಡ್ರೈವಿಂಗ್​ ಮಾಡಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

1 hour ago

ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಎಂದು ತಂದಿದ್ದ ಹಣವು ಕಳ್ಳತನಕ್ಕೆ ಒಳಗಾದ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ. ಬೈಕ್ ನ ಪೆಟ್ರೋಲ್…

1 hour ago

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ‌ಭಾನುವಾರ ಮುಂಜಾನೆ ಅಪಘಾತಕ್ಕೀಡಾಗಿದೆ.

2 hours ago