ಬೆಂಗಳೂರು: ಬಹುತೇಕ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಗರಿಷ್ಠ ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿವೆ. ಈ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್, ಅಂಕಿಸಂಖ್ಯೆಗಳು ಕೇವಲ ನಿಮ್ಮ ಊಹೆಯಷ್ಟೆ ಎಂದು ಹೇಳಿದ್ದಾರೆ.
ಅವರ ಟ್ವಿಟರ್ ವಿವರ ಹೀಗಿದೆ….
ಎಲ್ಲ ಸಮೀಕ್ಷೆದಾರರಿಗೆ ಗೌರವದಿಂದ ಹೇಳಬಯಸುತ್ತೇನೆ. ಬಿಜೆಪಿಗೆ 2014ರಲ್ಲಿ 282 ಸ್ಥಾನ, 2019ರಲ್ಲಿ 303 ಸ್ಥಾನ, 2022ರಲ್ಲಿ 156 ಸ್ಥಾನ ದೊರೆಯಬಹುದು ಎಂದು ಯಾರೂ ಸಮೀಕ್ಷೆ ನುಡಿದಿರಲಿಲ್ಲ. 2018ರಲ್ಲಿ 14 ಅಸೆಂಬ್ಲಿ ಸ್ಥಾನಗಳಲ್ಲಿ ಶೂನ್ಯ ಲೀಡ್ ಹೊಂದಿದ್ದರೂ 24000 ಬೂತ್ಗಳಲ್ಲಿ ನಾವು ಲೀಡ್ ಪಡೆದಿದ್ದೆವು. ಈ ಸಲ ಎಲ್ಲ ಅಸೆಂಬ್ಲಿ ಸ್ಥಾನಗಳು ನಮ್ಮ ಪರವಾಗಿದ್ದು, 31000 ಬೂತ್ಗಳಲ್ಲಿ ನಾವೇ ಲೀಡ್ ಪಡೆಯಲಿದ್ದೇವೆ. ಉಳಿದ ಅಂಕಿ ಸಂಖ್ಯೆಗಳು ನಿಮ್ಮ ಊಹೆಯಷ್ಟೆ ಎಂದಿದ್ದಾರೆ.