News Karnataka Kannada
Monday, April 29 2024
ಬೆಂಗಳೂರು ನಗರ

ರಾಜ್ಯದ ಎಲ್ಲ 34 ಸಚಿವರಿಗೆ ಬಂತು ಹೊಸ ಇನ್ನೊವಾ ಹೈಕ್ರಾಸ್‌ ಹೈಬ್ರಿಡ್‌ ಕಾರು

All the 34 ministers of the state got a new Innova high-cross hybrid car ...
Photo Credit : News Kannada

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಎಲ್ಲ 33 ಸಚಿವರಿಗೂ ಹೊಸದಾಗಿ ಇನ್ನೊವಾ ಹೈಕ್ರಾಸ್‌ ಹೈಬ್ರಿಡ್‌ ಕಾರುಗಳನ್ನು ಖರೀದಿಸಲಾಗಿದ್ದು, ಇದಕ್ಕಾಗಿ ರೂ. 9.90 ಕೋಟಿ ಖರ್ಚು ಮಾಡಲಾಗಿದೆ. ರಾಜ್ಯ ಸರ್ಕಾರಲು ನೇರವಾಗಿ ಟೊಯೊಟಾ ಕಿರ್ಲೋಸ್ಕರ್ ಬೆಂಗಳೂರು ಘಟಕದಿಂದಲೇ ಕಾರುಗಳನ್ನು ಖರೀದಿಸಿದ್ದು, ಹೊಸ ಕಾರುಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗರಿಷ್ಠ ಸುರಕ್ಷತೆ ಹೊಂದಿರಲಿವೆ.

ಹೊಸ ಕಾರುಗಳ ವಿತರಣೆ ಕುರಿತು ಟ್ವಿಟ್ ಮಾಡಿರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಅವರು ಕರ್ನಾಟಕ ಸರ್ಕಾರದ ಹೊಸ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. ಜೊತೆಗೆ ಸುಸ್ಥಿರತೆಗೆ ನಮ್ಮ ಬದ್ಧತೆಯ ಭಾಗವಾಗಿ, ಈ ವಾಹನವು ಅತ್ಯಾಧುನಿಕ ಸ್ವಯಂ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಟೆಕ್ ಅನ್ನು ಒಳಗೊಂಡಿದೆ ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ನಾವು ಕರ್ನಾಟಕದಲ್ಲಿ ಹಸಿರು ಮತ್ತು ಸ್ವಚ್ಛ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದ್ದೇವೆ ಎಂದಿದ್ದಾರೆ.

33 ಸಚಿವರಿಗೂ ಹೊಸದಾಗಿ ನೀಡಲಾಗಿರುವ ಇನ್ನೊವಾ ಹೈಕ್ರಾಸ್‌ ಹೈಬ್ರಿಡ್‌ ಕಾರುಗಳು ರಾಜ್ಯ ಸರ್ಕಾರದ ಬೇಡಿಕೆಗೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಪ್ರತಿ ಕಾರನ್ನು ರೂ. 30 ಲಕ್ಷ ಬೆಲೆಗೆ ಖರೀದಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು