News Karnataka Kannada
Thursday, May 02 2024
ಬೆಂಗಳೂರು ನಗರ

1 ಕೆಜಿ ಟೊಮೆಟೊ ಬೆಲೆ 125 ರೂ.ಗೆ ಏರಿಕೆ!

Tomato
Photo Credit :

ಬೆಂಗಳೂರು : ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಟೊಮೊಟೊ ಬೆಲೆ 125 ರೂ.ಗೆ ಏರಿಕೆಯಾಗಿದೆ

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಪೆಟ್ರೋಲ್ ಬಳಿಕ ಟೊಮೊಟೊ ಬೆಲೆ ಶತಕದಾಟಿದೆ. 1 ಕೆಜಿ ಟೊಮೊಟೊ ಬೆಲೆ 125 ರೂ. ಗಡಿ ದಾಟಿದೆ.

ಬೆಂಗಳೂರಿನಲ್ಲಿ ಬೀನ್ಸ್, ಈರುಳ್ಳಿ, ಟೊಮೊಟೊ, ಹೀರೇಕಾಯಿ, ತೊಗರಿ ಕಾಯಿ, ಬೆಂಡೆಕಾಯಿ, ಬದನೆಕಾಯಿ ಸೇರಿದಂತೆ ಕೆಲ ತರಕಾರಿಗಳ ಬೆಲೆ 100 ರೂ ಗಡಿ ದಾಟಿದೆ. ಕ್ಯಾಪ್ಸಿಕಾಂ, ತೊಂಡೆಕಾಯಿ, ಕ್ಯಾರೇಟ್, ನುಗ್ಗೇಕಾಯಿ ಬೆಲೆ, ಸೊಪ್ಪಿನ ದರಗಳಲ್ಲಿಯೂ ಏರಿಕೆ ಕಂಡಿವೆ.

ಕೋಲಾರದ ಎಪಿಎಂಸಿಯಲ್ಲಿ ಒಂದು ಕೆಜಿ ಟೊಮೆಟೊ 125 ರೂ. ಮಾರಾಟವಾಗುವುದರೊಂದಿಗೆ ದಾಖಲೆ ಬರೆದಿದೆ. 15 ಕೆಜಿ 1 ಬಾಕ್ಸ್ ಟೊಮೆಟೊ 1,900 ರೂ. ಗೆ ಮಾರಾಟವಾಗಿದೆ. ಅಕಾಲಿಕವಾಗಿ ಸುರಿದ ಭಾರೀ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ಟೊಮೆಟೊ ಬೆಲೆ ಏರಿಕೆಯಾಗಿದೆ. ಭಾರೀ ಮಳೆಯಿಂದಾಗಿ ಕೋಲಾರ ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಟೊಮೊಟೊ ಬೆಳೆ ಹಾನಿಯಾಗಿದೆ. ಹೀಗಾಗಿ ಟೊಮೊಟೊ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು