News Karnataka Kannada
Friday, May 10 2024
ಬೆಂಗಳೂರು ನಗರ

ಹೆಚ್ಚು ಹಬೆ ತೆಗೆದುಕೊಳ್ಳುವುದು ಬ್ಲ್ಯಾಕ್ ಫಂಗಸ್ ನ ದಾಳಿಗೆ ದಾರಿಯಾಗಬಹುದು: ವೈದ್ಯ ದೀಪಕ್ ಹಲ್ಲಿಪುರ

Photo Credit :

ಹೆಚ್ಚು ಹಬೆ ತೆಗೆದುಕೊಳ್ಳುವುದು ಬ್ಲ್ಯಾಕ್ ಫಂಗಸ್ ನ ದಾಳಿಗೆ ದಾರಿಯಾಗಬಹುದು: ವೈದ್ಯ ದೀಪಕ್ ಹಲ್ಲಿಪುರ

ಬೆಂಗಳೂರು : ಒಂದೆಡೆ ಕೊರೋನಾ ಸೋಂಕಿ ಜನರನ್ನು ಚಿಂತೆಗೀಡು ಮಾಡಿಸಿದರೆ, ಅದರಿಂದ ಗುಣಮುಖರಾದ ಅವರಿಗೆ ಇನ್ನೂ ಸಂಕಷ್ಟ ತಪ್ಪಿದ್ದಲ್ಲ ಎನ್ನುವಂತೆ ಬ್ಲ್ಯಾಕ್ ಫಂಗಸ್ ನ ದಾಳಿ ಹೆಚ್ಚಾಗುತ್ತಲೇ ಇದೆ. ಇದರ ಹರಡುವಿಕೆಯ ಕುರಿತು ಅನೇಕ ಕಾರಣಗಳನ್ನು ಹೇಳಲಾಗುತ್ತಿದೆ. 

 

ಆ ಕಾರಣಗಳ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ . ಅದುವೇ ಮಿತಿ ಮೀರಿದ ಹಬೆ ಅಂದರೆ ಸ್ಟೀಮ್‌ ತೆಗೆದುಕೊಳ್ಳುವ ಅಭ್ಯಾಸ. ಇದು ಕೂಡ ಬ್ಲ್ಯಾಕ್‌ ಫಂಗಸ್ ದಾಳಿಗೆ ಅವಕಾಶ ಮಾಡಿಕೊಡುತ್ತಿದೆ ಎನ್ನುತ್ತಾರೆ ಖ್ಯಾತ ವೈದ್ಯ ದೀಪಕ್ ಹಲ್ಲಿಪುರ . 

 

ಹೆಚ್ಚು ಬಾರಿ ಸ್ಟೀಮ್ ಮೊರೆ ಹೋದಾಗ ಮೂಗಿನ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ . ಈ ಸಂದರ್ಭದಲ್ಲಿ ಗಾಳಿಯಲ್ಲಿರುವ ಬ್ಲ್ಯಾಕ್‌ ಫಂಗಸ್ ವೈರಾಣುಗಳು ಮೂಗಿನ ಮೂಲಕ ದೇಹ ಪ್ರವೇಶಿಸುತ್ತವೆ ಎಂದು ಅವರು ರೋಗದ ಬರುವಿಕೆಯ ಕುರಿತು ಎಚ್ಚರಿಕೆ ನೀಡಿದ್ದಾರೆ . 

 

ಬ್ಲ್ಯಾಕ್ ಫಂಗಸ್ ನ ಅಟ್ಟಹಾಸ ಒಂದೆಡೆಯಾದರೆ, ಪ್ರಸ್ತುತ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಗೆ ಔಷಧಿಯ ತೀವ್ರ ಕೊರತೆ ಎದುರಾಗಿದೆ. ಇದನ್ನು ನೀಗಿಸಲು ರಾಜ್ಯ ಸರ್ಕಾರ ಹರಸಾಹಸ ಪಡುವಂತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು