ಹಿಜಾಬ್  ಪರವೋ ಇಲ್ಲವೇ ಕೇಸರಿ ಪರವಾಗಿ ಇದ್ದರೋ ಸಾರ್ವಜನಿಕವಾಗಿ ಬಹಿರಂಗಪಡಿಸಲಿ: ಡಿಕೆಶಿಗೆ ರೇಣುಕಾಚಾರ್ಯ ಸವಾಲು

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಅವರು ಹಿಜಾಬ್  ಪರವೋ ಇಲ್ಲವೇ ಕೇಸರಿ ಪರವಾಗಿ ಇದ್ದರೋ ಎಂಬುದನ್ನು ಸಾರ್ವಜನಿ ಕವಾಗಿ ಬಹಿರಂಗ ಪಡಿಸಲಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಸವಾಲು ಹಾಕಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಸರಿ ಶಾಂತಿಯ ಸಂಕೇತ.ನೀವು ಹಿಜಬ್ ಪರವಾಗಿ ವಕಾಲತ್ತು ವಹಿಸುವುದಾದರೆ, ನಾವು ಕೇಸರಿ ಪರ ಮಾತನಾಡುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಕೇಸರಿ ಪರನಾ ಅಥವಾ ಹಿಜಾಬ್ ಪರನಾ ‌ಡಿಕೆಶಿ ಹೇಳಬೇಕು.ಕೇಸರಿ ಖರೀದಿ ಬಗ್ಗೆ ಮಾತನಾಡಲು ಅವರಿಗೆ ಏನ್ ಹಕ್ಕಿದೆ?ಕೇಸರಿ ಖರೀದಿ ಮಾಡಲು ನಿನ್ನ ಕೇಳಬೇಕಾ..? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಕೇಸರಿ ಶಾಲು ಸಾವಿರ ಅಲ್ಲ ಲಕ್ಷ ಖರೀದಿ‌ ಮಾಡುತ್ತೇವೆ. ಕೇಸರಿ ಶಾಂತಿಯ ‌ಸಂದೇಶ. ನೀವು ಹಿಜಬ್ ಖರೀದಿಸಿ ನೀಡುವುದಾದರೆ, ನಾವು ಖರೀದಿ ಮಾಡುವುದರಲ್ಲಿ ತಪ್ಪು ಇಲ್ಲ ಸಮರ್ಥಿಕೊಂಡರು.

ಈಗ ರಾಜ್ಯದಲ್ಲಿ ನಡೆಯುತ್ತಿರುವ ಕೋಮು‌ಗಲಭೆಗೆ ಕಾಂಗ್ರೆಸ್ ಮುಖಂಡರು ಪ್ರಚೋದನೆ ಮಾಡುತ್ತಿದ್ದಾರೆ.ಮುಂದೆ ಇದರ ಪ್ರತಿಫಲ ಅನುಭವಿಸುತ್ತಾರೆ ಎಂದು ಎಚ್ಚರಿಕೆ ಕೊಟ್ಡರು. ಕೆಲ ಭಯೋತ್ಪಾದಕ ಸಂಘಟನೆ ತಪ್ಪಾಗಿ ಇದನ್ನು ಸುದ್ದಿ ಮಾಡುತ್ತಿವೆ.ಶಾಲೆಯಲ್ಲಿ ಕೇಸರಿ ಹಾಗೂ ಹಿಜಾಬ್ ಧರಿಸಬಾರದು.ಸಮವಸ್ತ್ರ ಎಲ್ಲಾ ಕಾಲದಲ್ಲೂ ಇದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಪ್ರಚೋಧನೆ ಕೊಡುತ್ತಿದ್ದಾರೆ. ಹಿಜಾಬ್ ಧರಿಸುವ ಬದಲು ಸಮವಸ್ತ್ರ ಧರಿಸಬೇಕು.ಶಿಕ್ಷಣ ಪ್ರತಿಯೊಂದು ಮಕ್ಕಳ ಹಕ್ಕು.ಇದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಶಿಕ್ಷಣದಲ್ಲಿ ಕೇಸರಿಕರಣ‌ ಮಾಡುವುದಿಲ್ಲ. ರಾಜಕಾರಣದಲ್ಲಿ ಕೇಸರಿ ಶಾಲು ಕೊಡುತ್ತಾ ಬಂದಿದ್ದೇವೆ.ಕೇಸರಿ ವಿರೋಧ ಮಾಡಿದರೆ, ಚುನಾವಣೆ ಬಂದಾಗ ಕಾಂಗ್ರೆಸ್ ಗೆ ಗೊತ್ತಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ನಾವು ಕೋಮುವಾದಿಗಳಲ್ಲ.ಶಿಕ್ಷಣದಲ್ಲಿ ಧರ್ಮ ಹಾಗೂ ರಾಜಕಾರಣ ಮಿಶ್ರಣ ಆಗಬಾರದು. ಕೇರಳ ಹಾಗೂ ಬಾಂಬೆ ಕೋರ್ಟ್ ಹೇಗೆ ಹೇಳಿದೆ ಅದೇ ರೀತಿಯಲ್ಲಿ ಇರಬೇಕು.ನ್ಯಾಯಾಂಗದ ಬಗ್ಗೆ ಮಾತನಾಡುವುದಿಲ್ಲ.ನಾವು ಮುಸ್ಲಿಂ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ಮೇಲೆ ಕೆಪಿಸಿಸಿ ಅಧ್ಯಕ್ಷರು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು,ಒಂದು ಡಿಕೆಶಿಗೆ ಹಾತಾಶೆ ಮನೋಭಾವ ಇದೆ.ಸರ್ಕಾರ ವರ್ಚಸ್ಸು ಇನ್ನಷ್ಟು ಹೆಚ್ಚಾಗುತ್ತಾ.ಇದು‌ ಕಾಂಗ್ರೆಸ್ ಗೆ ಹಿನ್ನಡೆ ‌ಹೀಗಾಗಿ ಹತಾಶೆಯಿಂದ ಮಾತಾನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ನಮ್ಮ ಸರ್ಕಾರ ಸುಭದ್ರವಾಗಿದ್ದು, ಯಾವ ಶಕ್ತಿಗಳು ಏನು ಮಾಡಲು ಸಾಧ್ಯವಿಲ್ಲ ‌ ಹಿಂದೆ ವೀರೇಂದ್ರ ಪಾಟೀಲ್ ಅಧಿಕಾರದಲ್ಲಿ ಇದ್ದಾಗ ಇದೇ ರೀತಿ ಕೋಮುಗಲಭೆ ಸೃಷ್ಟಿಸಲು ಕೆಲವರು ಯತ್ನಿಸುತ್ತಿದ್ದಾರೆ. ಇದರಲ್ಲಿ ಅವರು ಯಶಸ್ಸು ಕಾಣುವುದಿಲ್ಲ ಎಂದು ಹೇಳಿದರು. ಸಚಿವ ಸ್ಥಾನ ಸಿಗುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,ನಾನು ಜ್ಯೋತಿಷಿ ಅಲ್ಲ. ರಾಷ್ಟ್ರೀಯ ನಾಯಕರು ಹಾಗೂ ಸಿಎಂ ತೀರ್ಮಾನ ಮಾಡುತ್ತಾರೆ ಎಂದರು.

ಸೂಕ್ತ ಸಂದರ್ಭದಲ್ಲಿ ‌ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ.ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುರ್ನರಚನೆ ಸಿಎಂ ಪರಮಾಧಿಕಾರ ಅವರು ತೀರ್ಮಾನ ನಿರ್ಧರಿಸುತ್ತಾರೆ.ಸಚಿವ ದೂರು ಎಲ್ಲಿ ಹೇಳಬೇಕೊ ಅಲ್ಲಿ ಹೇಳಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Gayathri SG

Recent Posts

ಇಂದು (ಮೇ ೦8) ವಿಶ್ವ ರೆಡ್ ಕ್ರಾಸ್ ದಿನಾಚರಣೆ

ವಿಶ್ವ ರೆಡ್ ಕ್ರಾಸ್ ದಿನವನ್ನು ವಿಶ್ವದಾದ್ಯಂತ ಮೇ 8ರಂದು ಆಚರಿಸಲಾಗುತ್ತದೆ. ಸ್ವಿಸ್ ಉದ್ಯಮಿ ಮತ್ತು ವಿಶ್ವದ ಅತಿದೊಡ್ಡ ಮಾನವೀಯ ನೆರವು…

2 mins ago

ಡಿಕೆಶಿ ವಿರುದ್ಧ ಜೆಡಿಎಸ್‌-ಬಿಜೆಪಿ ಬೃಹತ್‌ ಪ್ರತಿಭಟನೆ

ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ಬುಧವಾರ ಡಿಸಿಎಂ ಡಿ.ಕೆಶಿವಕುಮಾರ್‌ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ರಾಮನಗರದ ಐಜೂರು…

6 mins ago

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ದಿನಾಂಕ ಫಿಕ್ಸ್

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಹಸೆಮಣೆ ಏರಲು ರೆಡಿಯಾಗಿದ್ದಾರೆ. ತಮಿಳಿನ ಖ್ಯಾತ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ…

21 mins ago

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಬರ್ಬರ ಹತ್ಯೆ

ಇಲ್ಲಿನ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

22 mins ago

ಮೆಕ್ಯಾನಿಕ್‌ಗಳ ಬಗ್ಗೆ ಅವಹೇಳ ಹೇಳಿಕೆ : ಝೀ ವಾಹಿನಿ ವಿರುದ್ಧ ಗ್ಯಾರೇಜ್‌ ಮಾಲಿಕರ ಸಂಘ ಆಕ್ರೋಶ

ಇತ್ತೀಚೆಗಷ್ಟೆ ಝೀ ವಾಹಿಯಲ್ಲಿ ಪ್ರಸಾರವಾಗುವ ಮಹಾನಟಿ ಕಾರ್ಯಕ್ರಮದಲ್ಲಿ ಮೆಕ್ಯಾನಿಕ್‌ಗಳ ಬಗ್ಗೆ ಹೇಳಿಕೆ ನೀಡಲಾಗಿತ್ತು ಹಾಗೂ ತೀರ್ಪುಗಾರರ ವಿರುದ್ಧ ಕೇಸ್‌ ಕೂಡ…

32 mins ago

ನನ್ನ ಹೆಸರು ಹೇಳದಿದ್ದರೆ ಕುಮಾರಸ್ವಾಮಿಗೆ ನಿದ್ದೆನೇ ಇಲ್ಲ ಎಂದ ಡಿಕೆ ಶಿವಕುಮಾರ್‌

ನನ್ನ ಹೆಸರು ಹೇಳದಿದ್ದರೆ ಕುಮಾರಸ್ವಾಮಿಗೆ ನಿದ್ದೆಯೇ ಬರುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಮಾಜಿ ಸಿಎಂ ಹೆಚ್‌ಡಿಕೆ ತಿರುಗೇಟು ನೀಡಿದ್ದಾರೆ.

38 mins ago