ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ರಾಜ್ಯದ ಬಹುತೇಕ ಕಡೆ ಮದ್ಯ ಮಾರಾಟ ನಿಷೇಧಿಸಲಾಗಿದೆ.ವಿಧಾನ ಪರಿಷತ್ ಚುನಾವಣೆ ಡಿ.8ರ ನಡೆಯುದರಿಂದ ಸಂಜೆ 4 ಗಂಟೆಯಿಂದ ಡಿ.10 ರ ರಾತ್ರಿ 10 ಗಂಟೆವರೆಗೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಚುನಾವಣೆ ನಡೆಯುವ ಪ್ರದೇಶಗಳಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ 43 ಗ್ರಾಮ ಪಂಚಾಯಿತಿಗಳು, ಆನೇಕಲ್, ಅತ್ತಿಬೆಲೆ, ಬೊಮ್ಮಸಂದ್ರ ಪುರಸಭೆಗಳನ್ನು ಒಳಗೊಂಡಂತೆ ಗ್ರಾಮಾಂತರ ಪ್ರದೇಶಗಳು ಹಾಗೂ ತಾಲೂಕು ಗಡಿ ಭಾಗಕ್ಕೆ ಹೊಂದಿಕೊಂಡಿರುವ 5 ಕಿ.ಮೀ ವ್ಯಾಪ್ತಿಯಲ್ಲಿ ಡಿ.8ರ ಸಂಜೆ 4 ಗಂಟೆಯಿಂದ ಡಿ.10ರ ರಾತ್ರಿ 10 ಗಂಟೆವರೆಗೆ ಯಾವುದೇ ರೀತಿಯ ಮದ್ಯ, ಬಿಯರ್, ವೈನ್ ಮತ್ತು ಇತರೆ ಮಾದಕ ದ್ರವ್ಯಗಳ ಹೊಂದುವಿಕೆ, ಸರಬರಾಜು, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.