ಬೆಂಗಳೂರು: ಇತ್ತೀಚೆಗೆ ಶೇ.99.9ರಷ್ಟು ಮೊದಲ ಡೋಸ್ ಲಸಿಕೆಯ ಗುರಿಯನ್ನು ಮುಟ್ಟಿದ್ದಂತ ಕರ್ನಾಟಕ, ಈಗ ಲಸಿಕಾಕರಣದಲ್ಲಿ ಶೇ.100ರಷ್ಟು ಮೊದಲ ಡೋಸ್ ನೀಡೋ ಮೂಲಕ, ಹೊಸ ದಾಖಲೆ ಬರೆದಿದೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ನಾವು ಗುರಿಯನ್ನು ತಲುಪಿದ್ದೇವೆ.
ಕರ್ನಾಟಕದ ನಾಲ್ಕು ಕೋಟಿ ವಯಸ್ಕ ನಾಗರೀಕರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ. ಆರೋಗ್ಯ ಇಲಾಖೆಯ ಕೆಲಸಗಾರರು, ಜಿಲ್ಲಾಡಳಿತದ ಪರಿಶ್ರಮದ ಮೂಲಕ ಶೇ.100ರಷ್ಟು ಮೊದಲ ಡೋಸ್ ಲಸಿಕೆಯನ್ನು ನೀಡುವಂತೆ ಆಗಿದೆ ಎಂದು ಹೇಳಿದ್ದಾರೆ.