ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮದಿನಾಚರಣೆ ಅಂಗವಾಗಿ ಗೂಗಲ್ ವಿಶೇಷ ಡೂಡಲ್ ಮೂಲಕ 20ನೇ ಶತಮಾನದ ಸಾಹಿತಿ ಅವರಿಗೆ ಗೌರವ ಅರ್ಪಿಸಿದೆ.
ಗೂಗಲ್ ತನ್ನ ಮುಖಪುಟದಲ್ಲಿ ಕುವೆಂಪು ಭಾವಚಿತ್ರವಿರುವ ಕನ್ನಡದಲ್ಲೇ ಗೂಗಲ್ ಬರೆದಿರುವ ಡೂಡಲ್ ರಚಿಸಿ ವಿಶೇಷವಾಗಿ ಗೌರವ ಸಲ್ಲಿಸಿದೆ. ಡಿ.29ರಂದು ಕುವೆಂಪು ಅವರ 113ನೇ ಜನ್ಮ ದಿನಾಚರಣೆಯಾಗಿದೆ.
ಕುವೆಂಪು ಅವರು 1904 ಡಿಸೆಂಬರ್ 29ರಂದು ಕುಪ್ಪಳ್ಳಿಯಲ್ಲಿ ಜನಿಸಿದ್ದರು. ಇವರು ತಮ್ಮ ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದ್ದರು.
ಡೂಡಲ್ ನಲ್ಲಿ ಕುವೆಂಪು ಬಿಳಿ ಪಂಚೆ ಮತ್ತು ಜುಬ್ಬದಲ್ಲಿ ಬಂಡೆಗಳ ಮಧ್ಯೆ ಕುಳಿತಿದ್ದಾರೆ. ಹಿನ್ನಲೆಯಲ್ಲಿ ಅವರ ನಿವಾಸ ಮತ್ತು ಪ್ರಕೃತಿ ಸೌಂದರ್ಯವಿದೆ.