News Karnataka Kannada
Monday, April 29 2024
ಬೆಂಗಳೂರು ನಗರ

ರಾಜ್ಯದ ಶೇ. 74ರಷ್ಟು ಕೊರೊನಾ ಪಾಸಿಟಿವ್‌ ಪ್ರಕರಣಗಳಲ್ಲಿ ರೋಗ ಲಕ್ಷಣಗಳೇ ಇಲ್ಲ

Covid Corona
Photo Credit :

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪಾಸಿಟಿವ್‌ ಪ್ರಕರಣಗಳಲ್ಲಿ ಶೇ. 74ರಷ್ಟು ಮಂದಿಗೆ ರೋಗಲಕ್ಷಣಗಳೇ ಇಲ್ಲ.ಎಲ್ಲ ಜಿಲ್ಲೆಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಗುರಿ ನೀಡಿರುವ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರ್‍ಯಾಂಡಮ್‌ ಪರೀಕ್ಷೆ ಮಾಡಲಾಗುತ್ತಿದೆ.

ಈ ವೇಳೆ ಕ್ಲಸ್ಟರ್‌ಗಳಲ್ಲಿ ಲಕ್ಷಣಗಳಿರದ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ದೃಢಗೊಳ್ಳುತ್ತಿದೆ. ನಿತ್ಯ 1.14 ಲಕ್ಷ ಕೊರೊನಾ ಸ್ವಾಬ್‌ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಆ ಪೈಕಿ ಕೊರೊನಾ ಲಕ್ಷಣಗಳಿರುವ 9,422 ಮಂದಿಯ ಸ್ವಾéಬ್‌ ಪರೀಕ್ಷೆಗೆ ಒಳಪಡಿಸಿದಾಗ ಕೇವಲ 58 ಮಂದಿ ಯಲ್ಲಿ ಕೊರೊನಾ ಪಾಸಿಟಿವ್‌ ವರದಿ ಯಾಗಿದೆ. ಕೊರೊನಾ ಲಕ್ಷಣಗಳಿರದ 84,792 ಮಂದಿಯಲ್ಲಿ 331 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

5,894 ಲಕ್ಷಣ ರಹಿತರು :

ಡಿ. 1ರಿಂದ ಡಿ. 24ವರೆಗೆ ರಾಜ್ಯದಲ್ಲಿ 6,902 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲಿ 1,008 ಮಂದಿ ಯಲ್ಲಿ ಕೊರೊನಾ ಲಕ್ಷಣಗಳು ಹಾಗೂ 5,894 ಸೋಂಕಿತರಿಗೆ ಲಕ್ಷಣಗಳು ಇಲ್ಲ. ಬೆಂಗಳೂರಿನಲ್ಲಿ 4,272 ಸೋಂಕಿತರಲ್ಲಿ 3,936 ಮಂದಿ, ಕೊಡಗು 364 ಸೋಂಕಿತರಲ್ಲಿ 308 ಮಂದಿ, ದ.ಕ. ಜಿಲ್ಲೆಯ 377 ಪ್ರಕರಣದಲ್ಲಿ 301, ಚಿಕ್ಕಮಗಳೂರು 308 ಸೋಂಕಿತರಲ್ಲಿ 186 ಮಂದಿ, ಮೈಸೂರು 307 ಸೋಂಕಿತರಲ್ಲಿ 169 ಮಂದಿಯಲ್ಲಿ ಕೊರೊನಾ ಲಕ್ಷಣಗಳೇ ಪತ್ತೆಯಾಗಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು