ಬೆಂಗಳೂರು: ಬೆಂಗಳೂರು ನಗರದ ಬಿಬಿಎಂಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆಯಲ್ಲೂ ಡೆಂಗ್ಯೂ ಕೇಸ್ ಗಳ ಸಂಖ್ಯೆ ಹೆಚ್ಚಾಗಿದೆ. ಮಳೆಗಾಲದಲ್ಲಿ ಹೆಚ್ಚು ಬಾಧಿಸುವಂತ ಡೆಂಗ್ಯೂ ಪ್ರಕರಣಗಳು ,ರಾಜ್ಯದಲ್ಲಿ ಈಗ ಬೇಸಿಗೆಯಲ್ಲೂ ಕಾಡುತ್ತಿವೆ. ಕಳೆದ 10 ದಿನಗಳಲ್ಲಿ 107 ಜನರಿಗೆ ಡೆಂಗ್ಯೂ ತಗುಲಿದೆ. ಅಲ್ಲದೇ 192 ಮಂದಿಗೆ ಚಿಕನ್ ಗುನ್ಯಾ ತಗುಲಿರೋದಾಗಿ ವರದಿಯಿಂದ ತಿಳಿದು ಬಂದಿದೆ.
ಕೇವಲ ಎರಡೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 177, ಮೈಸೂರು 56, ಬಳ್ಳಾರಿ 45, ಚಿತ್ರದುರ್ಗ 54, ಉಡುಪಿ 67 ಹಾಗೂ ಕೊಪ್ಪಳ 55 ಸೇರಿದಂತೆ 744 ಮಂದಿಗೆ ರಾಜ್ಯಾಧ್ಯಂತ ಡೆಂಗ್ಯು ಕಾಣಿಸಿಕೊಂಡಿದೆ.
ಡೆಂಗ್ಯೂ ನಂತ್ರ ಚಿಕನ್ ಗುನ್ಯಾ ಕೂಡ ಅಟ್ಟಹಾಸ ಮುಂದುವರೆಸಿದ್ದು, ಎರಡು ತಿಂಗಳಿನಲ್ಲಿ ಕೋಲಾರ 42, ತುಮಕೂರು 25, ವಿಜಯಪುರ 35 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 192 ಮಂದಿಯಲ್ಲಿ ಕಾಣಿಸಿಕಂಡಿದೆ. ಅಂದಹಾಗೇ ಕಳೆದ ವರ್ಷ 7,189 ಮಂದಿಗೆ ಡೆಂಗ್ಯೂ, 3,151 ಮಂದಿಗೆ ಚಿಕನ್ ಗುನ್ಯಾ ಪ್ರಕರಣ ದೃಢಪಟ್ಟಿತ್ತು.