ಕಳೆದ 24 ಗಂಟೆಯಲ್ಲಿ 23 ಒಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ವರದಿಯಾಗಿವೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಸುಧಾಕರ್ ಶುಕ್ರವಾರ ಟ್ವಿಟರ್ ನಲ್ಲಿ ಈ ವಿಷಯ ತಿಳಿಸಿದ್ದು, ರಾಜ್ಯದಲ್ಲಿ ಒಂದೇ ದಿನ ಪತ್ತೆಯಾದ ಗರಿಷ್ಠ ಪ್ರಕರಣಗಳಾಗಿವೆ.
ಅಮೆರಿಕ, ಯುರೋಪ್, ದುಬೈ, ತಾಂಜೇನಿ ಸೇರಿದಂತೆ ವಿವಿಧ ದೇಶಗಳಿಂದ ಬಂದಿದ್ದ ಪ್ರಯಾಣಿಕರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ.
ಅಮೆರಿಕದಿಂದ ಬಂದಿದ್ದ 15 ವರ್ಷದ ಮಗು, ಡೆರ್ನಾರ್ಕ್ ನಿಂದ 23 ವರ್ಷದ ಯುವಕ, ದಕ್ಷಿಣ ಆಫ್ರಿಕಕಾದಿಂದ 10 ವರ್ಷದ ಬಾಲಕ, ದ.ಆಫ್ರಿಕಾದಿಂದ ಬಂದಿದ್ದ 35 ವರ್ಷದ ವ್ಯಕ್ತಿ, ಅಮೆರಿಕದಿಂದ ಬಂದಿದ್ದ 25 ವರ್ಷದ ಯುವತಿ, ದುಬೈನಿಂದ ಬಂದಿದ್ದ 19 ವರ್ಷದ ಯುವಕ, ಕಾಂಗೋದಿಂದ ಬಂದಿದ್ದ 29 ವರ್ಷದ ವ್ಯಕ್ತಿ, ಯುಎಇನಿಂದ ಬಂದಿದ್ದ 42 ವರ್ಷದ ವ್ಯಕ್ತಿ, ಅಮೆರಿಕದಿಂದ ಬಂದಿದ್ದ 45 ವರ್ಷದ ವ್ಯಕ್ತಿ, ತಾಂಜೇನಿಯಾದಿಂದ ಬಂದಿದ್ದ ತಾಯಿ ಮತ್ತು ಮಗು ವಿಗೆ ಸೋಂಕು ಸೇರಿದಂತೆ ಹಲವರಿಗೆ ಸೋಂಕು ದೃಢಪಟ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.