News Karnataka Kannada
Saturday, May 11 2024
ಬೆಂಗಳೂರು ನಗರ

ರಾಜ್ಯದಲ್ಲಿ ಎಲ್​ಪಿಜಿ ದರದಲ್ಲಿ 10 ರೂ ಇಳಿಕೆ

Photo Credit :

ರಾಜ್ಯದಲ್ಲಿ ಎಲ್​ಪಿಜಿ ದರದಲ್ಲಿ 10 ರೂ ಇಳಿಕೆ

ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ 10 ರೂ. ಇಳಿಕೆಯಾಗಿದೆ. ಏ.1ರಿಂದ ಈ ಹೊಸ ದರ ಅನ್ವಯವಾಗಿದ್ದು, ಬೆಂಗಳೂರಿನಲ್ಲಿ ಪ್ರಸ್ತುತ 14.2 ಕೆ.ಜಿ. ಎಲ್​ಪಿಜಿ ಸಿಲಿಂಡರ್ ಬೆಲೆ 812 ರೂ. ಇದೆ. ಈ ಹಿಂದೆ 822 ರೂ. ಇತ್ತು. 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ 1,701 ರೂ. ಇದೆ.

ಕಳೆದ ಫೆಬ್ರವರಿ ಒಂದೇ ತಿಂಗಳಲ್ಲಿ ಮೂರು ಬಾರಿ ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್ ದರ ಏರಿಕೆಯಾಗಿತ್ತು. ಫೆ.4ರಂದು 25 ಯಾಗಿ ರೂ., ಫೆ.15ರಂದು 50 ರೂ. ಹಾಗೂ ಫೆ.25ರಂದು 25 ರೂ. ಏರಿಸಲಾಗಿತ್ತು. ಅಲ್ಲದೆ, ಡಿಸೆಂಬರ್‌ನಲ್ಲಿ ಎರಡು ಬಾರಿ ತಲಾ 50 ರೂ.ಹೆಚ್ಚಿಸಲಾಗಿತ್ತು. ಮೂರು ತಿಂಗಳಲ್ಲಿ ಸಿಲಿಂಡರ್ ಬೆಲೆಯನ್ನು ಹಂತ ಹಂತವಾಗಿ ಒಟ್ಟಾರೆ 200 ರೂ. ಹೆಚ್ಚಿಸಲಾಗಿತ್ತು. ಎಲ್​ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಸಹ 5 ಬಾರಿ ಹೆಚ್ಚಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು