News Karnataka Kannada
Saturday, May 11 2024
ಬೆಂಗಳೂರು ನಗರ

ಯುವರತ್ನ ಬಿಡುಗಡೆ ; ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ

Photo Credit :

ಯುವರತ್ನ ಬಿಡುಗಡೆ ; ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ

ಬೆಂಗಳೂರು: ಬಹುನಿರೀಕ್ಷಿತ ಪವರ್‌ ಸ್ಟಾರ್‌ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ತಮ್ಮ ಆರಾಧ್ಯ ದೈವವನ್ನು ಕಣ್ತುಂಬಿಕೊಳ್ಳಲು ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಜೊತೆಗೆ ಪುನೀತ್​ ಕಟ್​ಔಟ್​ಗೆ ಹಾಲಿನ ಅಭಿಷೇಕದ ಹಾಗೂ ಥಿಯೇಟರ್​ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಯುವರತ್ನ ಸಿನಿಮಾ ರಾಜಧಾನಿ ಬೆಂಗಳೂರಿನಲ್ಲೂ ಇಂದು ಬೆಳಿಗ್ಗೆಯಿಂದಲೇ ತನ್ನ ಪ್ರದರ್ಶನ ಶುರು ಮಾಡಿದೆ. ಮಧ್ಯ ರಾತ್ರಿಯಿಂದಲೇ ಪುನೀತ್​ ಸಿನಿಮಾ ನೋಡಲು ಚಿತ್ರಮಂದಿರದ ಮುಂದೆ ಕಾದು ಕುಳಿತಿದ್ದ ಅಭಿಮಾನಿಗಳು ತೆರೆಯ ಮೇಲೆ ಪವರ್​ಸ್ಟಾರ್​ ಹವಾ ಕಣ್ತುಂಬಿಗಳು ಕಾಯುತ್ತಿದ್ದರು. ಇದರ ಫಲವಾಗಿ ಬೆಂಗಳೂರಿನ ಎಲ್ಲಾ ಥಿಯೇಟರ್​ಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

ಅಭಿಮಾನಿಗಳಿಗಾಗಿಯೇ ವಿಶೇಷ ಪ್ರದರ್ಶನ ಏರ್ಪಾಡು ಮಾಡಿರುವ ಯುವರತ್ನ ಸಿನಿಮಾ ತಂಡ, ಅಭಿಮಾನಿಗಳಿಗಾಗಿ ಒಟ್ಟು 50 ಫ್ಯಾನ್ಸ್ ಶೋಗಳನ್ನ ಮೀಸಲಿರಿಸಿದೆ. ಹೀಗಾಗಿ ಊರ್ವಶಿ, ವಿರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಅಪ್ಪು ಅಭಿಮಾನಿಗಳ ಸಾಗರವೇ ಸೃಷ್ಟಿಯಾಗಿದೆ. ಬೆಳಗ್ಗೆ ಆರು ಗಂಟೆಗೆಯಿಂದಲೇ ಫ್ಯಾನ್ಸ್ ಶೋ ಆರಂಭವಾಗಿದ್ದು ಒಟ್ಟು 600ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯುವರತ್ನ ರಿಲೀಸ್ ಆಗಿದೆ. ಕರ್ನಾಟಕದಲ್ಲಿ 400, ಆಂಧ್ರ ತೆಲಂಗಾಣದಲ್ಲಿ 200 ಚಿತ್ರಮಂದಿರಗಳಲ್ಲಿ ಯುವರತ್ನ ರಿಲೀಸ್ ಆಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಒಟ್ಟಿಗೆ ತೆರೆಗೆ ಬಂದಿದೆ. ಲಾಕ್​ಡೌನ್ ಬಳಿಕ ರಿಲೀಸ್ ಆಗ್ತಿರೋ 3ನೇ ಬಿಗ್ ಬಜೆಟ್ ಸಿನಿಮಾ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು