ಬೆಂಗಳೂರು: ಸಚಿವ ರೊಷನ್ ಬೇಗ್ ಕಾರ್ಯಕ್ರಮೊಂದರಲ್ಲಿ ನರೇಂದ್ರ ಮೋದಿಗೆ ಅವಾಚ್ಯ ಶಬ್ಧಗಳನ್ನು ಬಳಸಿ ಮಾತನಾಡಿದ್ದಕ್ಕೆ ರಾಜದಾದ್ಯಂತ ಭಾರೀ ಅಕ್ರೋಶಕ್ಕೆ ಕಾರಣವಾಗಿತ್ತು.
ಇದಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ ಸಚಿವ ರೋಷನ್ ಬೇಗ್, ನರೇಂದ್ರ ಮೋದಿಯವರು ಬಿಜೆಪಿಗಷ್ಟೇ ಪ್ರಧಾನಿಯಲ್ಲ, ಅವರು ದೇಶದ ಪ್ರಧಾನಿ. ಪ್ರಧಾನಿಯನ್ನು ನಿಂದಿಸುವ ಉದ್ದೇಶ ಇರಲಿಲ್ಲ. ನನ್ನಿಂದ ಯಾರ ಭಾವನೆಗಾದ್ರೂ ಧಕ್ಕೆಯಾಗಿದ್ರೆ ಕ್ಷಮಿ ಯಾಚಿಸುತ್ತೇನೆ ಅಂತ ಮೂಲಸೌಕರ್ಯ, ಮಾಹಿತಿ ಮತ್ತು ಹಜ್ ಖಾತೆಯ ಸಚಿವ ರೋಷನ್ ಬೇಗ್ ಹೇಳಿದ್ದಾರೆ.
ನಾನು 6 ಬಾರಿ ಶಾಸಕನಾಗಿದ್ದೇನೆ. ನನ್ನ ವೃತ್ತಿಜೀವನದಲ್ಲಿ ಯಾರನ್ನೂ ಹೀಯಾಳಿಸಿಲ್ಲ. ನನಗೆ ಅಲ್ಪ ಸ್ವಲ್ಪ ತಮಿಳು ಭಾಷೆ ಬರುತ್ತದೆ. ತಮಿಳಿನಲ್ಲಿ ಅಷ್ಟೊಂದು ಪಾಂಡಿತ್ಯ ಇಲ್ಲದ ಕಾರಣ ಕೆಲವು ಪದಗಳನ್ನು ಅನುಚಿವಾಗಿ ಬಳಸಿರಬಹುದು. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿಬಿಡಿ ಎಂದಿದ್ದಾರೆ.