ಬೆಂಗಳೂರು: ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯು 2019ರ ಮಾರ್ಚ್ 21ರಿಂದ ಆರಂಭವಾಗಲಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಗುರುವಾರ ಪ್ರಕಟಿಸಿದೆ.
ಪರೀಕ್ಷೆಗಳು ಮಾರ್ಚ್ 21ಕ್ಕೆ ಆರಂಭವಾಗಿ ಎಪ್ರಿಲ್ 4ರ ತನಕ ನಡೆಯಲಿದೆ ಎಂದು ಶಿಕ್ಷಣ ಮಂಡಳಿ ತಿಳಿಸಿದೆ.
ಮಾ.21ರಂದು ಕನ್ನಡ/ಇಂಗ್ಲಿಷ್ ಪರೀಕ್ಷೆ
ಮಾ.23ರಂದು ಕೋರ್ ಸಬ್ಜೆಕ್ಟ್/ಎಕಾನಾಮಿಕ್ಸ್
ಮಾ.25ರಂದು ಗಣಿತ/ಸಮಾಜ ವಿಜ್ಞಾನ
ಮಾ.27ರಂದು ದ್ವಿತೀಯ ಭಾಷೆ
ಮಾ.29ರಂದು ವಿಜ್ಞಾನ
ಎಪ್ರಿಲ್2 ಐಚ್ಛಿಕ ವಿಷಯದ ಪರೀಕ್ಷೆ(ರಾಜಕೀಯ ಶಾಸ್ತ್ರ, ಕರ್ನಾಟಕ, ಹಿಂದೂಸ್ತಾನಿ ಸಂಗೀತ)
ಎಪ್ರಿಲ್ 4: ತೃತೀಯ ವಿಜ್ಞಾನ ಪರೀಕ್ಷೆಗಳು ನಡೆಯಲಿದೆ ಎಂದು ಶಿಕ್ಷಣ ಇಲಾಖೆಯು ಪ್ರಕಟಣೆಯಲ್ಲಿ ಹೇಳಿದೆ.