News Karnataka Kannada
Wednesday, May 01 2024
ಬೆಂಗಳೂರು ನಗರ

ಮಾಡೆಲ್ ಹೆಸರಲ್ಲಿ ಹುಡ್ಗೀರ್ ಗೆ ಬ್ಲಾಕ್ ಮೇಲ್ ದಂಧೆ

A close watch is being kept on the post that threatens communal harmony on the internet.
Photo Credit :

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಟಿನೇಜ್ ಹುಡುಗಿಯರನ್ನು ಟಾರ್ಗೆಟ್ ಮಾಡಿ ಅವರಲ್ಲಿ ಮಾಡೆಲ್ ಕನಸು ಹುಟ್ಟಿಸಿ ವಿವಿಧ ಭಂಗಿಯ ಫೋಟೋಗಳನ್ನು ಪಡೆದು ಬಳಿಕ ಬ್ಲಾಕ್ ಮೇಲೆ ಮಾಡುತ್ತಿದ್ದ ಕೊಡಗು ಮೂಲದ ಯುವಕನನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಕೊಡಗಿನವನಾದ ಪ್ರಪಂಚ್ ನಾಚಪ್ಪ ಬಂಧಿತ ಆರೋಪಿ. ಈತ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಉತ್ತಮ ಕುಟುಂಬದ ಬ್ಯಾಕ್ ರೌಂಡ್ ಇದ್ದರೂ ಡ್ರಗ್ ಗೆ ಅಡಿಟ್ ಆಗಿದ್ದನು ಹೀಗಾಗಿ ಮೋಜು ಮಸ್ತಿಗಾಗಿ ಅಡ್ಡದಾರಿ ಹಿಡಿದಿದ್ದ ಎಂದು ಹೇಳಲಾಗಿದೆ. ಅಡ್ಡ ದಾರಿಯಲ್ಲಿ ಹಣ ಸಂಪಾದಿಸುವ ಮತ್ತು ಹೆಣ್ಣು ಮಕ್ಕಳನ್ನು ಪಟಾಯಿಸಲು ತಂತ್ರ ರೂಪಿಸಿದ ಆತ ಅದಕ್ಕಾಗಿ ಮಾಡಿದ್ದು ಮಾಡೆಲ್ ಮಾಡುವ ವಂಚನೆಯ ತಂತ್ರ.

ಇದಕ್ಕಾಗಿ ಇನ್ ಸ್ಟಾಗ್ರಾಂ ನಲ್ಲಿ ಪ್ರತಿಕ್ಷ್ ಬೋರಾ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅದರಲ್ಲಿ ಸುಂದರ ಮತ್ತು ಅನುಕೂಲಸ್ಥ ಹೆಣ್ಣು ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ಹಾಯ್.. ಬಾಯ್ ಎಂಬ ಮೆಸೇಜ್ ಕಳಿಸುತ್ತಾ ಅವರನ್ನು ಪರಿಚಯಿಸಿಕೊಂಡು ನೀವು ಮಾಡೆಲ್ ರೀತಿ ಕಾಣುತ್ತೀರಾ ಎಂದು ಹೊಗಳುತ್ತಾ ತನ್ನ ಬುಟ್ಟಿಗೆ ಬೀಳಿಸಿಕೊಂಡು ನಿಮಗೆ ಮಾಡೆಲ್ ಆಗುವ ಎಲ್ಲ ಅರ್ಹತೆ ಇದೆ. ನಿಮಗೆ ಇಷ್ಟ ಇದ್ದರೆ ಅದಕ್ಕೆ ನಾನು ಹೆಲ್ಪ್ ಮಾಡುತ್ತೇನೆ ಎಂಬ ವಿಶ್ವಾಸದ ಮಾತುಗಳನ್ನಾಡಿ ಅವರಿಂದ ಮೊದಲಿಗೆ ಒಳ್ಳೆಯ ರೀತಿಯ ಫೋಟೋಗಳನ್ನು ತರಿಸಿಕೊಳ್ಳುತ್ತಿದ್ದನು.

ತದ ನಂತರ ತುಂಡುಡುಗೆಯ ಫೋಟೋ ತರಿಸಿಕೊಳ್ಳುತ್ತಾ ಆ ಪೋಟೋಗಳಿಗೆ ಒಂದಿಷ್ಟು ಹಣ ನೀಡಿ ಅವರಲ್ಲಿ ಇನ್ನಷ್ಟು ಆಸೆಗಳನ್ನು ಹುಟ್ಟಿಸುತ್ತಿದ್ದನು. ಬಳಿಕ ಅದೇ ಯುವತಿಗೆ ಬೆತ್ತಲೆ ಫೋಟೋ ಕಳುಹಿಸುವಂತೆ ಒತ್ತಾಯ ಮಾಡುತ್ತಿದ್ದನು. ಅದಕ್ಕೆ ಅವರು ಒಪ್ಪದಿದ್ದಾಗ ಹಿಂದೆ ಅವರು ಕಳುಹಿಸಿದ್ದ ಅರೆಬರೆ ಬಟ್ಟೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿ ಬಳಿಕ ಹಣಕ್ಕಾಗಿ ಬ್ಲಾಕ್ ಮೇಲೆ ಮಾಡುತ್ತಿದ್ದನು. ಹೀಗೆ ಈತ ಸುಮಾರು 25ಕ್ಕೂ ಹೆಚ್ಚು ಯುವತಿಯರಿಗೆ ವಂಚನೆ ಮಾಡಿದ್ದಾನೆ ಎನ್ನಲಾಗಿದೆ.

ಈ ನಡುವೆ ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿಯೊಬ್ಬಳು ಈತನ ವಂಚನೆಯ ಜಾಲಕ್ಕೆ ಸಿಲುಕಿ ಆತ್ಮಹತ್ಯೆಗೂ ಯತ್ನಿಸಿದ್ದಳು. ಈ ವೇಳೆ ಆಕೆಯ ಪೋಷಕರು ವಿಚಾರಿಸಿದಾಗ ಆಕೆ ನಡೆದಿದ್ದನ್ನು ಬಿಚ್ಚಿಟ್ಟಿದ್ದಾಳೆ. ಬಳಿಕ ಪೋಷಕರು ಸಾಮಾಜಿಕ ಕಾರ್ಯಕರ್ತೆಯೊಬ್ಬರ ಸಹಾಯದಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪ್ರಪಂಚ್ ನಾಚಪ್ಪನನ್ನು ಬಂಧಿಸಿ ಆತನ ಮೊಬೈಲ್ ನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಈತನ ಮೊಬೈಲ್ ನಲ್ಲಿ ನೂರಾರು ಯುವತಿಯರ ಫೋಟೋಗಳು ಪತ್ತೆಯಾಗಿದೆ.

ಸದ್ಯ ಪೊಲೀಸರು ಈ ಸಂಬಂಧ ತನಿಖೆ ಮುಂದುವರೆಸಿದ್ದು, ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆಯಾ? ಈತನ ವಂಚನೆಯ ಸುಳಿಯಲ್ಲಿ ಸಿಲುಕಿ ಅದೆಷ್ಟು ಹೆಣ್ಣುಮಕ್ಕಳು ತಮ್ಮ ಬದುಕನ್ನು ಮೂರಾಬಟ್ಟೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿದ ಬಳಿಕವಷ್ಟೆ ನೈಜಾಂಶ ಹೊರಬರಬೇಕಿದೆ.

ಇದುವರೆಗೆ ಬೇರೆ ಬೇರೆ ರೀತಿಯಲ್ಲಿ ಹೆಣ್ಮಕ್ಕಳನ್ನು ವಂಚಿಸುತ್ತಾ ಬ್ಲಾಕ್ ಮೇಲ್ ಮಾಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆದರೆ ಇದೊಂದು ಹೊಸ ಬಗೆಯ ಪ್ರಕರಣವಾಗಿದ್ದು, ಇದರ ಕಿಂಗ್ ಪಿನ್ ಪ್ರಪಂಚ್ ನಾಚಪ್ಪನೇನಾ ಅಥವಾ ಆತನ ಹಿಂದೆ ಜಾಲ ಇದೆಯಾ? ಎಂಬ ಪ್ರಶ್ನೆಗಳು ಇದೀಗ ಕಾಡಲಾರಂಭಿಸಿವೆ. ಅದು ಏನೇ ಇರಲಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಯುವತಿಯರು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು