ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಮಾಜಿ ಶಾಸಕರೊಬ್ಬರ ಮಗನಿಗೆ ಹನಿ ಟ್ಯಾಪ್ ಮಾಡುವ ಮೂಲಕ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ರಾಸಲೀಲೆಯ ಸಿ.ಡಿ. ಇರುವುದಾಗಿ ಮಹಿಳೆಯೊಬ್ಬರು ತನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಅವರು ದೂರು ನೀಡಿರುವರು.
ಇತ್ತೀಚಿಗೆ ಮಾಜಿ ಶಾಸಕರ ಮಗನಿಗೆ ವೀಡಿಯೋ ಕಾಲ್ ಮಾಡುವ ಮೂಲಕ ಈ ವೀಡಿಯೋವನ್ನು ತಯಾರಿಸಲಾಗಿದೆ ಎಂದು ದೂರಲಾಗಿದೆ.
ತನ್ನ ಹೆಸರು ಕೆಡಬಾರದು ಎನ್ನುವ ಕಾರಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿರುವವರಿಗೆ ತಾನು 13 ಸಾವಿರ ರೂಪಾಯಿ ನೀಡಿದ್ದೆ. ಆದರೆ ಮಹಿಳೆ ಮತ್ತೆ ಮತ್ತೆ ಹಣಕ್ಕಾಗಿ ಪೀಡಿಸುತ್ತಿರುವುದಾಗಿ ಮಾಜಿ ಶಾಸಕ ಮಗ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿರುವನು.