News Karnataka Kannada
Saturday, May 18 2024
ಬೆಂಗಳೂರು ನಗರ

ಮತದಾರರಿಗೆ ಬಸ್ ಪ್ರಯಾಣ ದರ ಏರಿಕೆ ಬಿಸಿ!

Photo Credit :

ಮತದಾರರಿಗೆ ಬಸ್ ಪ್ರಯಾಣ ದರ ಏರಿಕೆ ಬಿಸಿ!

ಬೆಂಗಳೂರು: ಮತದಾನ ತಮ್ಮ ಹಕ್ಕು, ಅದನ್ನು ಚಲಾಯಿಸಲೇಬೇಕು ಎಂದು ಬೆಂಗಳೂರಿನಲ್ಲಿ ನೆಲೆಸಿರುವ ಕೆಲ ಮಂದಿಗೆ ಬಸ್ ಪ್ರಯಾಣ ದರ ಏರಿಕೆಯಾಗಿರುವುದು ಭಾರೀ ಹೊಡೆತ ನೀಡಿದೆ.

ಬೆಂಗಳೂರಿನಲ್ಲಿ ಹೊರಜಿಲ್ಲೆಗಳಿಂದ ಬಂದು ಕೆಲಸ ಮಾಡುವ ಬಹಳಷ್ಟು ಮಂದಿಯಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಖಾಸಗಿ ಬಸ್ ಮಾಲಕರು ಪ್ರಯಾಣ ದರ ಏರಿಕೆ ಮಾಡಿದ್ದಾರೆ.

ನಾಳೆ ನಡೆಯಲಿರುವ ಮತದಾನದಲ್ಲಿ ಭಾಗಿಯಾಗಲು ಹೆಚ್ಚಿನವರು ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿದ್ದಾರೆ. ಆದರೆ ಪ್ರಯಾಣ ದರವು 1,050 ಹಾಗೂ ಗರಿಷ್ಠ 2,800ಕ್ಕೆ ಏರಿಕೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಇದು 500 ಹಾಗೂ ಗರಿಷ್ಠ 1,300 ರೂ. ಇತ್ತು. ಆದರೆ ಮತದಾನದಲ್ಲಿ ಭಾಗಿಯಾಗಲು ತೆರಳುವವರು ಹಣದ ಬಗ್ಗೆ ತಲೆಕೊಡಿಸದೆ ಸೀಟುಗಳನ್ನು ಕಾಯ್ದಿರಿಸುತ್ತಿದ್ದಾರೆ.

ಮಂಗಳೂರು, ವಿಜಯಪುರ, ಬೆಳಗಾವಿ, ಕಲಬುರ್ಗಿ, ಕೊಪ್ಪಳ, ಧಾರವಾಡ ಕಡೆಗೆ ತೆರಳುವ ಎಲ್ಲಾ ಬಸ್ ಗಳ ಬಹುತೇಕ ಸೀಟುಗಳು ಭರ್ತಿಗೊಂಡಿದೆ ಎಂದು ವರದಿಗಳು ಹೇಳಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು