ಬೆಂಗಳೂರು ನಗರ

ಭಾರತ – ಮಯನ್ಮಾರ್‌ ಗಡಿ ನಿರ್ಬಂಧ ತೆರವು: ಕಾಳು ಮೆಣಸು ದರ ಕುಸಿತ ಸಂಭವ!

ಬೆಂಗಳೂರು:  ಭಾರತ ಮತ್ತು ಮಯನ್ಮಾರ್‌ ಗಡಿಯಲ್ಲಿನ ಮಣಿಪುರ ರಾಜ್ಯಕ್ಕೆ ಸೇರಿದ  ಮೊರೆಹ್ ನ  Integrated Check Post (ICP) ನ ಗೇಟ್  1ಮತ್ತು 2ನ್ನು ತೆರೆದು ವ್ಯಾಪಾರ ಪುನರಾರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ.  ಕೇಂದ್ರ ವಿದೇಶಾಂಗ ಸಚಿವಾಲಯದ ಸೂಚನೆ ಮೇರೆಗೆ ಈ ಗೇಟ್‌ ಗಳನ್ನು  ಈ ವಾರವಷ್ಟೆ ತೆರೆಯಲಾಗಿದೆ. ಈ ಎರಡೂ ಗೇಟ್‌ ಗಳನ್ನು  ಕಳೆದ 2020 ರ ಮಾರ್ಚ್‌ ನಲ್ಲಿ ಕೋವಿಡ್‌ ಸಾಂಕ್ರಮಿಕ ಉಲ್ಪಣಿಸಿದ ನಂತರ ಮುಚ್ಚಲಾಗಿತ್ತು.

ಮಯನ್ಮಾರ್‌ ನ ಅಧಿಕಾರಿಗಳ ನಿಯೋಗ ನವದೆಹಲಿಯ ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ  ಗೇಟ್‌ ತೆರೆದು ವ್ಯಾಪಾರ ವಹಿವಾಟಿಗೆ ಅನುಕೂಲ ಕಲ್ಪಿಸಿಕೊಡಲು  ಕೋರಿದ ಮೇರೆಗೆ ಈ ಗೇಟ್‌ ಗಳನ್ನು ತೆರೆಯಲಾಗಿದೆ.

ಗೇಟ್‌ ಗಳ ತೆರವಿನಿಂದ  ದ್ವಿಪಕ್ಷೀಯ ವ್ಯಾಪಾರ ವೃದ್ದಿಯಾಗುವುದಾದರೂ ಇತರ ವಸ್ತುಗಳ ಜತೆ ಸಂಬಾರ ವಸ್ತುಗಳ ಹೆಸರಿನಲ್ಲಿ ಅಡಿಕೆ, ಕಾಳುಮೆಣಸು ಕೂಡ ಕಡಿಮೆ ಬೆಲೆಗೆ ಆಮದಾಗುತ್ತಿವೆ. ಇದರಿಂದಾಗಿ ದೇಶದಲ್ಲಿ ಅಡಿಕೆ ಮತ್ತು ಕಾಳು ಮೆಣಸಿನ ದರ ಕುಸಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮಯನ್ಮಾರ್‌  ನಿಂದ ಆಮದಾಗುವ ಕಡಿಮೆ ದರ್ಜೆಯ  ಅಡಿಕೆ ಮತ್ತು ಕಾಳು ಮೆಣಸಿಗೆ ನಿರ್ಬಂಧ ಹೇರಬೇಕೆಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.

ಭಾರತ ಅಡಿಕೆ ಮತ್ತು ಕಾಳುಮೆಣಸು ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದೆ. ಈ ವಸ್ತುಗಳು ಒಳ ಬರಲಾರಂಭಿಸಿದರೆ ನಮ್ಮ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿ ಬೆಳೆಗಾರರ ಹಿತಕ್ಕೆ ಹಾನಿಯಾಗಲಿದೆ. ಆದ್ದರಿಂದ ತಾವು ಈ ಬಗ್ಗೆ ಗಮನ ಹರಿಸಿ ಮಯನ್ಮಾರ್‌ ಗಡಿಯಲ್ಲಿನ ಮಣಿಪುರ ಗೇಟುಗಳ ಮೂಲಕ ಅಡಿಕೆ ಮತ್ತು ಕಾಳುಮೆಣಸು ಒಳನುಸುಳಿ ದೇಶೀಯ ಮಾರುಕಟ್ಟೆ ಪ್ರವೇಶಿಸದಂತೆ ನಿರ್ಬಂಧಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಕೊಡ್ಗಿ ಅವರು ಮನವಿ ಮಾಡಿದ್ದಾರೆ.

ಮಯನ್ಮಾರ್‌ ಮತ್ತು ಬಾರತದ ನಡುವಿನ ದ್ವಿಪಕ್ಷೀಯ ವಹಿವಾಟು  ವರ್ಷದಿಂದ ವರ್ಷಕ್ಕೆ ಹೆಚ್ಚಳ ದಾಖಲಿಸುತ್ತಿದೆ.  ಈಶಾನ್ಯ ರಾಜ್ಯಗಳಾದ  ಅರುಣಾಚಲ ಪ್ರದೇಶ , ಮಣಿಪುರ, ಮಿಜೋರಾಂ  ಮತ್ತು ನಾಗಾಲ್ಯಾಂಡ್‌ ರಾಜ್ಯಗಳಲ್ಲಿ  1643 ಕಿಲೋಮೀಟರ್‌ ಗಡಿಯನ್ನು ಹಂಚಿಕೊಂಡಿರುವ ಮಯನ್ಮಾರ್‌  ನಲ್ಲಿ  ಕೃಷಿ ಉತ್ಪನ್ನಗಳು ಭಾರತಕ್ಕಿಂತ ಕಡಿಮೆ ದರ ಇದೆ.  2019-  20 ರ ಅಂಕಿ  ಅಂಶಗಳ ಪ್ರಕಾರ  ಮಯನ್ಮಾರ್‌ ಗೆ ಒಟ್ಟು 872 ಮಿಲಿಯನ್‌ ಡಾಲರ್‌ ಮೌಲ್ಯದ  ಸರಕುಗಳು ರಫ್ತಾಗಿವೆ ಇದರಲ್ಲಿ  ಔಷಧಗಳು, ಟ್ರಾಕ್ಟರ್‌ , ವಾಹನ ಬಿಡಿ ಭಾಗಗಳು, ಪೆಟ್ರೋಲಿಯಂ ಉತ್ಪನ್ನಗಳು , ಶೀಥಲೀಕರಿಸಿದ ಗೋ ಮಾಂಸ, ಕಬ್ಬಿಣದ ಸರಳುಗಳು ಇವೆ.

ಇದೇ ಅವಧಿಯಲ್ಲಿ ಮಯನ್ಮಾರ್‌ ನಿಂದ ಭಾರತಕ್ಕೆ 742 ಮಿಲಿಯನ್‌ ಡಾಲರ್‌ ಮೌಲ್ಯದ ಸರಕು ಆಮದಾಗಿದ್ದು ಇದರಲ್ಲಿ ಎಣ್ಣೆ ಕಾಳುಗಳು , ಒಣಗಿದ ಹಣ್ಣು,  ಮರ ಇದೆ. ಮಯನ್ಮಾರ್‌  ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದು  ಇದು ಸಾರ್ಕ್‌
ದೇಶವಾಗಿರುವುದರಿಂದ ಸಹಜವಾಗೇ  ಆಮದು ತೆರಿಗೆ ವಿನಾಯ್ತಿ ಪಡೆಯುತ್ತದೆ. ಇದರಿಂದ ಭಾರತದ ಕೃಷಿ ಉತ್ಪನ್ನಗಳ ದರ ಕುಸಿದು ರೈತರಿಗೆ ತೊಂದರೆ ಆಗುತ್ತದೆ ಎಂಬುದು  ರೈತ ಸಂಘಟನೆಗಳ ಆತಂಕವಾಗಿದೆ.

ಈ ಹಿಂದೆ ಮಯನ್ಮಾರ್‌ ನಿಂದ ಆಮದಾಗುತಿದ್ದ ಅಡಿಕೆಯಿಂದಾಗಿ ದೇಶದಲ್ಲಿ ಅಡಿಕೆ ದರ ತೀವ್ರ ಕುಸಿತ ದಾಖಲಿಸಿತ್ತು. ಆಗ ಕೇಂಧ್ರ ಸರ್ಕಾರ ಮದ್ಯ ಪ್ರವೇಶಿಸಿ ಅಡಿಕೆಗೆ ಕಿಲೋಗೆ ಶೇಕಡಾ 108 ರಷ್ಟು ಆಮದು ತೆರಿಗೆ ವಿಧಿಸಿತ್ತು. ಮುಂದೆಯೂ ಕೃಷಿ ಉತ್ಪನ್ನಗಳ ದರ ಕುಸಿದರೆ ಸರ್ಕಾರ ಆಮದು ತೆರಿಗೆ ವಿಧಿಸುವ ಅವಕಾಶ ಇದ್ದೇ ಇದೆ.

Sneha Gowda

Recent Posts

ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ರೋಟರಿಗೆ ಸಿಲುಕಿ ಬಾಲಕ ಸಾವು

ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ರೋಟರಿಗೆ ಬಾಲಕ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

5 mins ago

ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ಗೆ ಎನ್‌ ಶಶಿಕುಮಾ‌ರ್ ನೇಮಕ ಸಾಧ್ಯತೆ

ಅವಳಿ ನಗರದಲ್ಲಿ ಹೆಚ್ಚುತ್ತಿರುವ ಕ್ರೈಂ ರೇಟ್ ಕಡಿವಾಣ ಹಾಕುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನ‌ರ್ ರೇಣುಕಾಸುಕುಮಾರ ಅವರನ್ನು ಬದಲಾವಣೆ ಮಾಡಬೇಕು ಅಂತ…

23 mins ago

ಜರ್ಮಿನಿಯಿಂದ ಲಂಡನ್‌ಗೆ ಹಾರಿದ ಪ್ರಜ್ವಲ್​ ರೇವಣ್ಣ

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಹೋಗಿದ್ದು, ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು…

43 mins ago

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ

ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

1 hour ago

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಬಸ್‌ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ…

1 hour ago

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

2 hours ago