ಬೆಂಗಳೂರು: ಭಾನುವಾರ ರಾಜ್ಯದಲ್ಲಿ ಹತ್ತು ಸಾವಿರ ಕೋವಿಡ್ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು 6,40,661 ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳು ಬಂದಿದ್ದು, ಬೆಂಗಳೂರಿನಲ್ಲಿ 4,340 ಹೊಸ ಕೋವಿಡ್ ಪ್ರಕರಣಗಳು ಮತ್ತು ಮೈಸೂರುನಲ್ಲಿ 1,037 ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಗಳಲ್ಲಿ 22 ಸಾವು ದಾಖಲಾಗಿದ್ದು, ಒಟ್ಟು ಸಾವಿನ ಸಂಖ್ಯೆ 3,067 ಕ್ಕೆ ಏರಿದೆ. ಮೈಸೂರಿನಲ್ಲೂ 12 ಸಾವು ದಾಖಲಾಗಿದ್ದು ನಗರದಲ್ಲಿ ಒಟ್ಟು ಸಾವಿನ ಸಂಖ್ಯೆ 810ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಭಾನುವಾರ 85,508 ಕೊರೋನಾ ಪರೀಕ್ಷೆಗಳನ್ನು ನಡೆಸಲಾಯಿತು. ರಾಜ್ಯಾದ್ಯಂತ ಈವರೆಗೆ ಒಟ್ಟು 52 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಶನಿವಾರದ ಚೇತರಿಕೆಯ ಸಂಖ್ಯೆ 8,989ಕ್ಕೆ ಹೋಲಿಸಿದರೆ ಭಾನುವಾರ ಕೇವಲ 7,287 ಕಂಡು ಬಂದಿದೆ.