ಬೆಂಗಳೂರು ನಗರ

ಬೆಂಗಳೂರು: ಸಾಲಕೊಟ್ಟು ಪ್ರಾಣ ಕಳೆದುಕೊಂಡ ಸ್ನೇಹಿತ

ಬೆಂಗಳೂರು : ಸ್ನೇಹಿತರನ್ನು  ರಕ್ತ ಸಂಬಂಧವನ್ನೂ  ಮೀರಿದವರು ಎನ್ನುತ್ತಾರೆ. ಒಳ್ಳೆ ಸ್ನೇಹಿತ ತನ್ನ ಪ್ರಾಣ ಒತ್ತೆ ಇಟ್ಟು ಮತ್ತೊಬ್ಬ ಸ್ನೇಹಿತನ ಪ್ರಾಣ ಕಾಪಾಡ್ತಾನೆ ಅಂತಾರೆ. ಆದ್ರೆ ಇಲ್ಲಿ ಎಲ್ಲವೂ ಉಲ್ಟಾ ಆಗಿದೆ.

ರಕ್ತ ಸಂಬಂಧನ ಮೀರಿದ ಬಂಧು ಎನಿಸಿಕೊಂಡವರು ರಕ್ತ ಹರಿಸಿದ್ದಾನೆ. ಪ್ರಾಣ ಕಾಪಾಡಬೇಕಾದವನೇ ಸ್ನೇಹಿತನ ಪ್ರಾಣ ತೆಗೆದಿದ್ದಾನೆ. ದೊಡ್ಡವರು ಒಂದು ಮಾತು ಹೇಳ್ತಾರೆ ಸ್ನೇಹಿತರ  ಮಧ್ಯೆ, ಸ್ನೇಹದಲ್ಲಿ  ಹಣ ಬರಬಾರದು ಅಂತ. ಇಲ್ಲಾಗಿದ್ದೂ ಅದೇ, ಚೆನ್ನಾಗಿಯೇ ಇದ್ದ ಸ್ನೇಹಿತರ ಮಧ್ಯೆ ಹಣದ ವಿಚಾರ ಬಂದಿತ್ತು. ಸಾಲ ಕೇಳಿ ಸ್ನೇಹ ಕಳೆದುಕೊಂಡಿದ್ದೊಂದೇ ಅಲ್ಲ, ಈತ ಪ್ರಾಣವನ್ನೂ ಕಳೆದುಕೊಂಡಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನ ಹಳ್ಳಿ ವ್ಯಾಪ್ತಿಯ ದೇವಣ್ಣನ ಪಾಳ್ಯ ಎಂಬಲ್ಲಿ ಘಟನೆ ನಡೆದಿದೆ. ಅಲ್ಲಿ ಮಂಜುನಾಥ್ ಎಂಬ 28 ವರ್ಷ ವಯಸ್ಸಿನ ಯುವಕ ಹತ್ಯೆಯಾಗಿದ್ದಾನೆ. ಆಘಾತಕಾರಿ ವಿಚಾರ ಅಂದ್ರೆ ಇಲ್ಲಿ ಮಂಜುನಾಥ್ ಹತ್ಯೆಯಾಗಿದ್ದು ಬೇರೆ ಯಾರಿಂದಲೋ ಅಲ್ಲ, ತನ್ನ ಸ್ನೇಹಿತ ಸಂತೋಷ್ ಎಂಬಾತನಿಂದ.

ಮೃತ ಮಂಜುನಾಥ್ ಹಾಗೂ ಆರೋಪಿ ಸಂತೋಷ್ ಇಬ್ಬರೂ ಸ್ನೇಹಿತರಾಗಿದ್ದರು. ಮಂಜುನಾಥ್ ಹಾಲು ವ್ಯಾಪಾರ ಮಾಡ್ತಾ ಇದ್ದರೆ, ಸಂತೋಷ್ ಕೃಷಿಕನಾಗಿದ್ದ. ಸಾಕಷ್ಟು ವರ್ಷಗಳ ಕಾಲ ಚೆನ್ನಾಗಿಯೇ ಇದ್ದರು. ಈಗ ಕೆಲದಿನಗಳ ಹಿಂದೆ ಸಂತೋಷ್‌ಗೆ ಆರ್ಥಿಕವಾಗಿ ಸಮಸ್ಯೆ ಶುರುವಾಗಿತ್ತು. ಅದನ್ನು ಸ್ನೇಹಿತ ಮಂಜುನಾಥ್ ಬಳಿ ಹೇಳಿಕೊಂಡಿದ್ದ. ಆಗ ಮಂಜುನಾಥ್ ಗೆಳೆಯನಿಗೆ ಧೈರ್ಯ ತುಂಬಿದ್ದ. ಅಲ್ಲದೇ ತನ್ನಲ್ಲಿದ್ದ 25 ಸಾವಿರ ರೂಪಾಯಿಗಳನ್ನು ಸಾಲವಾಗಿ ಗೆಳೆಯ ಸಂತೋಷ್‌ಗೆ ಮಂಜನಾಥ್ ಕೊಟ್ಟಿದ್ದ.

ಮಂಜುನಾಥ್ ನಿಂದ 25 ಸಾವಿರ ರೂಪಾಯಿ ಹಣ ಪಡೆದಿದ್ದ ಸಂತೋಷ್, ತನ್ನ ಸಮಸ್ಯೆಯನ್ನೇನೋ ಬಗೆಹರಿಸಿಕೊಂಡಿದ್ದ. ಆದರೆ ಸುಮಾರು ಟೈಮ್ ಆದರೂ ಮಂಜುನಾಥ್‌ಗೆ ಅದನ್ನು ವಾಪಸ್ ಮಾಡಿರಲಿಲ್ಲ. ಹಣ ವಾಪಸ್ ಬೇಕು ಅಂತ ಮಂಜುನಾಥ್‌ನೇ ಸಾಕಷ್ಟು ಸಲ ಕೇಳಿದ್ದ. ಇದೇ ವಿಚಾರಕ್ಕೆ ಸ್ನೇಹಿತರ ನಡುವೆ ಆಗಾಗ ಗಲಾಟೆ, ಜಗಳ ನಡೆಯುತ್ತಿತ್ತು.

ಕಳೆದ 10ನೇ ತಾರೀಖಿನಂದು ರಾತ್ರಿ ದೇವಣ್ಣನಪಾಳ್ಯದ ಪೆಟ್ರೋಲ್ ಬಂಕ್‌ಗೆ ಬಂದಿದ್ದ ಮಂಜುನಾಥ್, ಸಂತೋಷ್ ಬಳಿ ಹಣ ವಾಪಸ್ ಕೊಡುವಂತೆ ಕೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ಗಲಾಟೆ ನಡೆದಿದೆ. ಆಗ ಬೈಕ್‌ನಲ್ಲಿದ್ದ ಮಂಜುನಾಥ್ ಮೇಲೆ ಸಂತೋಷ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಘಟನೆಯಲ್ಲಿ ಮಂಜುನಾಥ್ ತಲೆ ಮತ್ತು ಕುತ್ತಿಗೆಗೆ ತೀವ್ರವಾಗಿ ಗಾಯವಾಗಿತ್ತು. ಹೀಗಾಗಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ಮಾಡಿದ ವೈದ್ಯರು ತಲೆ ಒಳಗೆ ಭಾರೀ ಹಾನಿಯಾಗಿದೆ ಅಂತ ಹೇಳಿದ್ದರು. ಮರುದಿನ ಬೆಳಿಗ್ಗೆ ಮಂಜುನಾಥ್ ಹಾಸಿಗೆಯಿಂದ ಕೆಳಗೆ ಬಿದ್ದು, ತೀವ್ರ ಗಾಯದಿಂದ ನರಳಿ ಪ್ರಜ್ಞೆ ಕಳೆದುಕೊಂಡರು. ಆದಾದ ಬಳಿಕ ಶಸ್ತ್ರ ಚಿಕಿತ್ಸೆ ಮಾಡಿದ್ರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಆಸ್ಪತ್ರೆಯಲ್ಲೇ ಮಂಜುನಾಥ್ ಕೊನೆಯುಸಿರೆಳೆದರು.

ಮಂಜುನಾಥ್ ಸಾವಿನಿಂದ ಬಡ ಕುಟುಂಬ ಕಂಗೆಟ್ಟಿದೆ. ಹಾಲು ಮಾರಿ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಈಗ ಆಧಾರ ಇಲ್ಲದಂತಾಗಿದೆ. ಮಗನನ್ನು ಕಳೆದುಕೊಂಡ ಹೆತ್ತವರು, ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಇದೀಗ ಮಂಜುನಾಥ್ ತಂದೆ ಆರೋಪಿ ಸಂತೋಷ್ ವಿರುದ್ಧ ದೂರು ನೀಡಿದ್ದಾರೆ.

Gayathri SG

Recent Posts

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

8 mins ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

58 mins ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

1 hour ago

ಬಿರುಗಾಳಿ ಸಹಿತ ಮಳೆಗೆ ಕುಸಿದ ಮಹಾದ್ವಾರ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

1 hour ago

ಮತ್ತೆ ಭರ್ಜರಿ ಏರಿಕೆ ಕಂಡ ‌ಚಿನ್ನದ ಬೆಲೆ !

ಜಾಗತಿಕವಾಗಿ ಚಿನ್ನಕ್ಕೆ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ…

2 hours ago

ಮಳೆಯಿಂದಾಗಿ ಪಂದ್ಯ ರದ್ದು; ಪ್ಲೇಆಫ್​ಗೇರಿದ್ದು ಯಾರು ?

ಐಪಿಎಲ್ 2024ರ 66ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ತಂಡ ಗುಜರಾತ್ ತಂಡವನ್ನು ಎದುರಿಸಬೇಕಿತ್ತು. ಆದರೆ, ಟಾಸ್‌ಗೂ ಮುನ್ನವೇ…

2 hours ago