News Karnataka Kannada
Monday, April 29 2024
ಬೆಂಗಳೂರು ನಗರ

ಬೆಂಗಳೂರು ನಗರದಲ್ಲಿ ಇಂದಿನಿಂದ ಆಟೋ ಪ್ರಯಾಣ ದರ ಹೆಚ್ಚಳ

Auto
Photo Credit :

ಬೆಂಗಳೂರು:ಇಂದಿನಿಂದ ಮೊದಲ 2 ಕಿಲೋಮೀಟರ್​​ಗೆ 30 ರೂಪಾಯಿ ನೀಡಬೇಕಾಗಿದ್ದು, ನಂತರ ಪ್ರತಿ ಕಿಲೋ ಮೀಟರ್​ಗೆ 15 ರೂ. ದರವನ್ನು ಆಟೋ ಪ್ರಯಾಣಿಕರು ನೀಡಬೇಕಾಗಿದೆ.

ಸದ್ಯ ಇದು ಬೆಂಗಳೂರು ನಗರದಲ್ಲಿ ಜಾರಿಗೆ ಬರಲಿದ್ದು, ದಿನ ಹೆಚ್ಚುತ್ತಿರುವ ವಿವಿಧ ಅವಶ್ಯಕ ವಸ್ತುಗಳ ಬೆಲೆ ಏರಿಕೆ ನಡುವೆ ಇಂದಿನಿಂದ ಆಟೋಕ್ಕೆ ಕೂಡ ಪ್ರಯಾಣಿಕರು ಹೆಚ್ಚಿನ ಹಣವನ್ನು ನೀಡಬೇಕಾಗಿದೆ.

ಇಂದಿನಿಂದ ಕನಿಷ್ಠ ಪ್ರಯಾಣ ದರವನ್ನು 25 ರೂ.ನಿಂದ 30 ರೂ.ಗೆ ಏರಿಸಲಾಗಿದ್ದು, ಪ್ರತಿ ಕಿ.ಮೀ. ದರವನ್ನು 13 ರೂ.ನಿಂದ 15 ರೂ.ಗೆ ಹೆಚ್ಚಳ ಮಾಡಲಾಗಿದೆ.

ಕಾಯುವಿಕೆಯ ದರ ಮೊದಲ 5 ನಿಮಿಷ ಉಚಿತವಾಗಿರುತ್ತದೆ. ನಂತರ ಪ್ರತಿ 15 ನಿಮಿಷಕ್ಕೆ 5 ರೂ. ನಿಗದಿಪಡಿಸಲಾಗಿದೆ. ಪ್ರಯಾಣಿಕರ ಲಗೇಜು ದರ ಮೊದಲ 20 ಕೆ.ಜಿಗೆ ಉಚಿತವಾಗಿರಲಿದೆ. 20 ಕೆ.ಜಿಯಿಂದ 50 ಕೆ.ಜಿ ವರೆಗೆ5 ರೂ. ನಿಗದಿಪಡಿಸಲಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಆಟೋ ಪ್ರಯಾಣ ದರ ಸಾಮಾನ್ಯ ದರ ಜೊತೆಗೆ ಅರ್ಧ ಪಟ್ಟು ಹೆಚ್ಚಳವಾಗಲಿದೆ.

ಆಟೋಕ್ಕೆ ಬೇಕಾಗಿರುವ ಇಂದನದ ಬೆಲೆ ಕೂಡ ಹೆಚ್ಚಳವಾಗಿದ್ದು, ಇದಲ್ಲದೇ ಕಳೆದ 9 ವರ್ಷದಿಂದ ಅನೇಕ ಬದಲಾವಣೆಯಾಗಿದ್ದು, ನಮ್ಮ ದರದಲ್ಲಿ ಹೆಚ್ಚಳ ಮಾಡಿಲ್ಲ, ಇದಲ್ಲದೇ ಬೆಲೆ ಏರಿಕೆಗೆ ಅನುಗುಣವಾಗಿ ನಾವು ಕೂಡ ಪ್ರಯಾಣದ ದರವನ್ನು ಹೆಚ್ಚಳಮಾಡಲೇ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಇದು ನಮಗೆ ಅವಶ್ಯಕತೆಯಾಗಿ ಬೇಕಾಗಿದ್ದು, ನಮ್ಮ ಜೀವನವನ್ನು ಕಟ್ಟಿಕೊಳ್ಳಬೇಕಾಗಿದೆ. ದುಬಾರಿ ದುನಿಯಾದಲ್ಲಿ ಬದುಕುವುದು ಸುಲಭವಾಗುತ್ತಿಲ್ಲ, ಸಂಸಾರದ ನೊಗವನ್ನು ಹೊರಲು ಈಗ ಆಟೋದಿಂದ ಬರುತ್ತಿರುವ ಆದಾಯ ಸಾಲುತ್ತಿಲ್ಲ ಅಂತ ಆಟೋ ಚಾಲಕರು ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು