ಬೆಂಗಳೂರು(ಜ.10) : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಚಿತ್ರ ಆತ್ಮಹತ್ಯೆ ಪ್ರಕರಣವೊಂದು ದಾಖಲಾಗಿದೆ. ಹೌದು, ಟಿವಿ ನೊಡ್ಬೇಡ ಅಂದಿದ್ದಕ್ಕೆ ಯುವಕನೊಬ್ಬ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೆ.ಜೆ.ನಗರದ 11 ನೇ ಕ್ರಾಸ್ ನಲ್ಲಿ ಘಟನೆ ಕಳೆದ ರಾತ್ರಿ(ಭಾನುವಾರ) ನಡೆದಿದೆ. ಸಯ್ಯದ್ ಸಾಹೀಲ್ (23) ಎಂಬಾರನೇ ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ.
ಸಯ್ಯದ್ ಸಾಹೀಲ್ ಪ್ರತಿ ನಿತ್ಯ ಟೀವಿ ನೋಡವುದರಲ್ಲೇ ಮಗ್ನನಾಗಿರುತ್ತಿದ್ದನಂತೆ. ಹೀಗಾಗಿ ಸಯ್ಯದ್ನ ವರ್ತನೆಯಿಂದ ರೊಚ್ಚಿಗೆದ್ದ ತಂದೆ ಟೀವಿ ನೋಡಬೇಡ ಅಂತ ವಾರ್ನಿಂಗ್ ಮಾಡಿದ್ದರು. ಇಷ್ಟಕ್ಕೆ ಕುಪಿತಗೊಂಡ ಸಯ್ಯದ್ ಸ್ವತಃ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.