News Karnataka Kannada
Wednesday, May 01 2024
ಬೆಂಗಳೂರು ನಗರ

ಬೆಂಗಳೂರಿನಿಂದ ಕೊಡಗು ಮತ್ತು ಕಬಿನಿಗೆ ಹೆಲಿಕಾಪ್ಟರ್ ಸೇವೆ

Chopper
Photo Credit :

ಬೆಂಗಳೂರು : ಹೆಲಿಕಾಪ್ಟರ್ ಸಾರಿಗೆ ಸಂಸ್ಥೆ, ಬ್ಲೇಡ್(BLADE), ರಾಜ್ಯದಲ್ಲಿ ಬೆಂಗಳೂರು-ಕೊಡಗು ಮತ್ತು ಬೆಂಗಳೂರು-ಕಬಿನಿ ಮಾರ್ಗಗಳಲ್ಲಿ ತನ್ನ ನಿಗದಿತ ಬೈ-ದಿ-ಸೀಟ್ ಸೇವೆಗಳನ್ನು ಪ್ರಾರಂಭಿಸಿದೆ.

ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬೆಂಗಳೂರಿನಿಂದ ಎರಡೂ ಸ್ಥಳಗಳಿಗೆ ಒಬ್ಬ ವ್ಯಕ್ತಿಗೆ 16,000 ರೂ. ಪ್ರಯಾಣ ದರ ನಿಗದಿ ಮಾಡಿದೆ. ಈ ಸೇವೆಯು ರಾಜ್ಯದಲ್ಲಿ ಹೆಲಿಕಾಪ್ಟರ್ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ತರುತ್ತದೆ ಮತ್ತು ಬೆಂಗಳೂರಿನಿಂದ ಎರಡು ನಗರಗಳಿಗೆ ರಸ್ತೆಯ ಮೂಲಕ 6-7 ಗಂಟೆಗಳ ಪ್ರಯಾಣದ ಸಮಯವನ್ನು ಒಂದು ಗಂಟೆಗೆ ಕಡಿಮೆ ಇಳಿಸುತ್ತದೆ.

ಮಡಿಕೇರಿ ಮತ್ತು ಕಬಿನಿ ರಾಜ್ಯದ ಎರಡು ಪ್ರಮುಖ ಪ್ರವಾಸಿ ತಾಣಗಳಾಗಿವೆ. ‘ಕರ್ನಾಟಕವು ದೇಶದ ಕೆಲವು ಅತ್ಯಂತ ಸುಂದರವಾದ ತಾಣಗಳನ್ನು ಹೊಂದಿದೆ. ಆದಾಗ್ಯೂ,ಪ್ರಯಾಣವು ಬಹಳ ತ್ರಾಸದಾಯಕವಾಗಿದೆ. ಬೆಂಗಳೂರಿನಿಂದ 6-7 ಗಂಟೆಗಳ ರಸ್ತೆ ಪ್ರಯಾಣವು ಪ್ರಯಾಣಿಕರು ತಮ್ಮ ರಜಾದಿನವನ್ನು ಆನಂದಿಸಲು ಕಳೆಯಬಹುದಾದ ಅಮೂಲ್ಯ ಸಮಯವನ್ನು ತಿನ್ನುತ್ತದೆ. ಬ್ಲೇಡ್(BLADE) ಇದಕ್ಕೆ ಪರಿಹಾರವನ್ನು ತಂದಿದೆ. ಒಂದು ಗಂಟೆಯ ತಡೆರಹಿತ ಅನುಭವ ಹೆಲಿಕಾಪ್ಟರ್ ನಿಂದ ಲಭ್ಯವಾಗಲಿದೆ’ ಎಂದು ಬ್ಲೇಡ್ ಇಂಡಿಯಾದ ಎಂಡಿ ಅಮಿತ್ ದತ್ತಾ ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.

ಒಂದು ಹೇಳಿಕೆಯಲ್ಲಿ, ಬ್ಲೇಡ್ ಇಂಡಿಯಾವು ‘ದಕ್ಷ ವಾಯು ಸಾರಿಗೆ ವ್ಯವಸ್ಥೆಯ ಮೂಲಕ ದೇಶದಲ್ಲಿ ದಟ್ಟಣೆಯ ಮತ್ತು ಪ್ರವೇಶಿಸಲಾಗದ ಮಾರ್ಗಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ’ ಎಂದು ತಿಳಿಸಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು