ಬೆಂಗಳೂರು ನಗರ

ಪಟ್ರೋಲ್‌ ಸುರಿದುಕೊಂಡು ಪತ್ನಿ ಬೆಂಕಿಗಾವುತಿ!

ಬೆಂಗಳೂರು: ಪತಿ ಊಟಕ್ಕೆ ಹೋಟಲ್‌ಗೆ ಕರದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕೆ ಪತ್ನಿ ಪಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.ಗೊಲ್ಲಹಳ್ಳಿ ಗ್ರಾಮದ ನಿವಾಸಿ 33 ವರ್ಷದ ಸಂಧ್ಯಾ ಹಾಗೂ ಮಗಳು ಕುಸುಮಾ (4) ಮತ್ತು ಮಗ ರೋಹಿತ್ (2) ಸಾವಿಗೀಡಾದ ದುರ್ದೈವಿಗಳು. ಐದು ವರ್ಷಗಳ ಹಿಂದೆ ಸಂಧ್ಯಾ, ಶ್ರೀಕಾಂತ್‌ ಎಂಬುವವರ ಜೊತೆ ವಿವಾಹವಾಗಿದ್ದರು.

ಈ ಮಧ್ಯೆ ತನ್ನ ಇಬ್ಬರು ಮಕ್ಕಳಿಗೂ ಕೂಡ ಬೆಂಕಿ ತಗುಲಿದ್ದು ಮೂವರೂ ಸಾವಗೀಡಾದ ಘಟನೆ ದೊಡ್ಡಬಳ್ಳಾಪುರ ಪಟ್ಟಣ ಸಮೀಪದ ಎಸ್‌ಎಂ ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ತನ್ನನ್ನು ಊಟಕ್ಕೆ ಹೋಟೆಲ್‌ಗಳಿಗೆ ಕರೆದೊಯ್ಯುವಂತೆ ಸಂಧ್ಯಾ ಆಗಾಗ್ಗೆ ಗಂಡನನ್ನು ಕೇಳುತ್ತಿದ್ದಳು. ಆದರೆ ಅವನು ಪತ್ನಿಯ ಆಸೆಗಳನ್ನು ಪೂರೈಸಲು ವಿಫಲವಾಗುತ್ತಿದ್ದ. ಇದರಿಂದ ಮನನೊಂದ ಪತ್ನಿ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದಾಳೆ. ಈ ನಡುವೆ ಬಂದ ಇಬ್ಬರು ಮಕ್ಕಳು ಬೆಂಕಿ ತಗುಲಿದೆ. ತೀವ್ರ ಸುಟ್ಟಗಾಯಗಳಿಂದ ನರಳುತ್ತಿದ್ದ ಮೂವರನ್ನೂ ಗ್ರಾಮಸ್ಥರು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಮಂಗಳವಾರ ಮಗ ರೋಹಿತ್ ಸಾವನ್ನಪ್ಪಿದ್ದು, ನಂತರ ಮರುದಿನ ಮಹಿಳೆ ಮತ್ತು ಅವರ ಮಗಳು ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಇದೀಗ ಮೃತ ಮಹಿಳೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಲ್ಲದೆ ಮಹಿಳೆಯ ಪೋಷಕರು ಶ್ರೀಕಾಂತ್ ವಿರುದ್ಧ ಯಾವುದೇ ಆರೋಪ ಮಾಡಿಲ್ಲ.

Swathi MG

Recent Posts

ನಂಜನಗೂಡು ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ಹೆಚ್. ಡಿ ರೇವಣ್ಣ

ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಹೆಚ್.…

14 mins ago

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

42 mins ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

1 hour ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

2 hours ago

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

2 hours ago

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

3 hours ago