ಬೆಂಗಳೂರು : ರಾಜ್ಯದ ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ ವಿಚಾರದ ಕುರಿತಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ದಿನ ಇಲ್ಲದ ಆಜಾನ್ ವಿಚಾರ ಈಗ ಏಕೆ ಬಂದಿದೆ? ಇದೇ ರೀತಿ ಮಾಡ್ತಾ ಹೋದರೆ ಬಿಜೆಪಿ ಸರ್ವನಾಶವಾಗುತ್ತೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಇಲ್ಲದ ಆಜಾನ್ ವಿಚಾರ ಈಗ ಏಕೆ ಬಂದಿದೆ? ಇದೇ ರೀತಿ ಮಾಡ್ತಾ ಹೋದರೆ ಬಿಜೆಪಿ ಸರ್ವನಾಶವಾಗುತ್ತೆ. ಡಾ.ಮನಮೋಹನ್ ಸಿಂಗ್ರನ್ನು ಮೌನಿ ಸಿಂಗ್ ಎನ್ನುತ್ತಿದ್ದರು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಮೌನಿ ಆಗಿದ್ದಾರೆ. ಇದು ಉತ್ತರ ಪ್ರದೇಶವಲ್ಲ, ಕರ್ನಾಟಕ. ರಾಜ್ಯದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡಿ ಎಂದು ಹೇಳಿದರು.
ರಾಜ್ಯದಲ್ಲಿರುವುದು ಆರ್ ಎಸ್ಎಸ್ ಮೆಚ್ಚಿಸುವ ಸರ್ಕಾರ. ರಾಜ್ಯ ಬಿಜೆಪಿ ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ. ರಾಜ್ಯದಲ್ಲಿರುವುದು ರಿಮೋಟ್ ಸರ್ಕಾರ. ಆರ್ಎಸ್ಎಸ್ ಮೆಚ್ಚಿಸುವುದಕ್ಕೆ ನಡೆಸುತ್ತಿರುವ ಸರ್ಕಾರವಾಗಿದೆ ರಾಜ್ಯ ಸರ್ಕಾರದ ವಾಗ್ದಾಳಿ ನಡೆಸಿದ್ದಾರೆ.