ಬೆಂಗಳೂರು: ದಿವಂಗತ ಡಾ. ರಾಜ್ ಕುಮಾರ್ ಅವರ 90ನೇ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳು ತುಂಬಾ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ರಾಜ್ ಅಭಿಮಾನಿ ಸಂಘಗಳು ರಾಜ್ಯದಾದ್ಯಂತ ರಕ್ತದಾನ, ಅನ್ನದಾನ ಸಹಿತ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಇರುವ ರಾಜ್ ಕುಮಾರ್ ಅವರ ಸಮಾಧಿಯ ಜಾಗದಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಸೇರಿದ್ದರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸುಮಲತಾ ಅಂಬರೀಷ್ ಆಗಮಿಸಿ ನಮನ ಸಲ್ಲಿಸಿದರು.
ರಾಜ್ಯ ಸರ್ಕಾರ ಕೂಡ ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಆಚರಿಸುತ್ತಿದೆ.