ಬೆಂಗಳೂರು : ಖ್ಯಾತ ನಟಿ ಮತ್ತು ಆಂಧ್ರಪ್ರದೇಶದ ಶಾಸಕಿ ರೋಜಾ ಪ್ರಯಾಣಿಸುತ್ತಿದ್ದ ತಾಂತ್ರಿಕ ದೋಷದಿಂದಾಗಿ ರಾಜಮಂಡ್ರಿ-ತಿರುಪತಿ ಇಂಡಿಗೊ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ.ತಾಂತ್ರಿಕ ದೋಷದ ಕಾರಣದಿಂದ ಪ್ರಯಾಣಿಕರನ್ನು ವಿಮಾನದಿಂದ ಇಳಿಯಲು ಅನುಮತಿಸಲಾಗಿಲ್ಲ ಮತ್ತು ತುರ್ತು ಲ್ಯಾಂಡಿಂಗ್ ಮಾಡಿದ ನಂತರ ಅವರು ಸುಮಾರು ನಾಲ್ಕು ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ಕಾಯಬೇಕಾಯಿತು.
ನಟಿ ರೋಜಾ, ಟಿಡಿಪಿ ಶಾಸಕ ವೇಗುಳ್ಳ ಜೋಗೇಶ್ವರ ರಾವ್, ಮಾಜಿ ಸಚಿವ ಎನಮ ರಾಮಕೃಷ್ಣಡು ಸೇರಿದಂತೆ 75 ಪ್ರಯಾಣಿಕರು ಇದ್ದ ವಿಮಾನ ರಾಜಮಂಡ್ರಿಯಿಂದ ಹೊರಟು ತಿರುಪತಿಗೆ ತಲುಪಬೇಕಿತ್ತು.