ಕ್ರೈಸ್ತ ಸಮುದಾಯದ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಮನವಿ

ಬೆಂಗಳೂರು:  ಕ್ರೈಸ್ತ ಸಮುದಾಯದ ವಿರುದ್ಧ ಕೇಳಿಬರುತ್ತಿರುವ ಆಧಾರರಹಿತ ಆರೋಪಗಳ ಬಗ್ಗೆ ಮತ್ತು ಸಮುದಾಯದ  ವಿರುದ್ಧ ನಡೆಯುತ್ತಿರುವ ದೌರ್ಜನ್ಯ , ಹಲ್ಲೆ , ವಿಗ್ರಹಗಳ ಧ್ವಂಸ ಬೆದರಿಕೆಗಳ ಬಗ್ಗೆ ತನಿಖೆ ಮಾಡಲು ನಿವೃತ್ತ ನ್ಯಾಯಾಧೀಶರಿಗೆ ಅಥವಾ ಉನ್ನತ ಮಟ್ಟದ ಸಮಿತಿಗೆ ವಹಿಸಲು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹ್ಯಾರಿ ಡಿಸೋಜ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ .

ಸ್ವಾತಂತ್ರ್ಯಪೂರ್ವ ಮತ್ತು ನಂತರ ಈ ದೇಶ ಕಟ್ಟಲು ದೇಶದ ಜನತೆಗೆ ಶಿಕ್ಷಣ , ಆರೋಗ್ಯ , ಸಾಮಾಜಿಕ ಕ್ಷೇತ್ರದಲ್ಲಿ ಕ್ರೈಸ್ತ  ಸಮುದಾಯ ನೀಡಿರುವ ಸೇವೆಯನ್ನು ಇಂದಿನ ಯುವಜನತೆ ಮರೆತು ತಮ್ಮ ಸ್ವಾರ್ಥಕ್ಕಾಗಿ ತಮ್ಮ ಲಾಭಕ್ಕಾಗಿ ಕ್ರೈಸ್ತ ಸಮುದಾಯದವರ ವಿರುದ್ಧ ದಾಳಿ , ಹಲ್ಲೆಗಳನ್ನು ಮಾಡುತ್ತಿದ್ದಾರೆ ಹಳ್ಳಿ , ಗುಡ್ಡಗಾಡು ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಿ ಸೇವೆ ನೀಡಿರುವ ಕ್ರೈಸ್ತ ಸಮುದಾಯಕ್ಕೆ ಇಂದು ಅತಂತ್ರ ಸ್ಥಿತಿ ನಿರ್ಮಾಣ ವಾಗಿದ್ದು ಕ್ರೈಸ್ತ ಸಮುದಾಯ ಭಯದ ವಾತಾವರಣವನ್ನು ಎದುರಿಸುತ್ತಿದ್ದಾರೆ . ಕರ್ನಾಟಕ ಸರ್ಕಾರದ ದಾಖಲೆಗಳ ಪ್ರಕಾರ ರಾಜ್ಯದಲ್ಲಿ ಕ್ರೈಸ್ತ ಸಮುದಾಯ ಕೇವಲ 11.30 ಲಕ್ಷ ಜನಸಂಖ್ಯೆ , ರಾಜ್ಯದಲ್ಲಿ ಕ್ರೈಸ್ತ ಸಮುದಾಯ ಸುಮಾರು ಶೇ .6.5 ರಷ್ಟು ಜನಸಂಖ್ಯೆ ಇತ್ತು . ಆದರೆ ಇಂದು ಶೇ .2.5 ರಷ್ಟು ಆಗಿದೆ . ಬಿರಿಯಾನಿ ನೀಡಿ ಮತಾಂತರ ಮಾಡುತ್ತಿದ್ದಾರೆ .

ಆಸೆ ಆಮಿಷಗಳನ್ನು ಹಣ ನೀಡಿ ಮತಾಂತರ ಮಾಡುತ್ತಿದ್ದಾರೆ ಎಂದು ಬೊಬ್ಬೆ ಹಾಕುತ್ತಾ ಆರೋಪಗಳನ್ನು ಮಾಡುತ್ತಿರುವ  ನಾಟಕೀಯ ಆರ್ಭಟಗಳನ್ನು ನೋಡಿದರೆ ರಾಜ್ಯದಲ್ಲಿ ಕ್ರೈಸ್ತ ಸಮುದಾಯ ಜನಸಂಖ್ಯೆ 25 ರಿಂದ 35 ಲಕ್ಷ ಆಗಬೇಕಾಗಿತ್ತು . ಮತಾಂತರ ಆಗಿದ್ದಲ್ಲಿ ಸರ್ಕಾರದಲ್ಲಿ ದಾಖಲೆಗಳಲ್ಲಿ ದಾಖಲಾಗುತ್ತಿತ್ತು . ಆ ದಾಖಲೆಗಳನ್ನು ಬಿಡುಗಡೆ ಮಾಡಬೇಕು . ಮತಾಂತರ ಆಗದೇ ಇದ್ದಾಗ ಮತಾಂತರೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ . ಆರೋಪ ಮಾಡಿ ತಮ್ಮ ಸ್ವಾರ್ಥಕ್ಕೆ ಗೊಂದಲ ಸೃಷ್ಟಿಸುವವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುವ ಬದಲು ಅವರಿಗೆ ರಾಜ ಮರ್ಯಾದೆಯನ್ನು ನೀಡಿ ಪ್ರೋತ್ಸಾಹ ನೀಡುತ್ತಿರುವುದನ್ನು ನೋಡುತ್ತಿದ್ದೇವೆ . ಇದರಿಂದ ಪ್ರೇರಿತರಾಗಿ ಇವರು ಸರ್ಕಾರ ತಮಗೆ ಏನು ಮಾಡುವುದಿಲ್ಲ ಎಂದು ಸಾರ್ವಜನಿಕವಾಗಿ ಕಾನೂನಿಗೆ ಹೆದರದೆ ಒಂದೊಂದು ಗೊಂದಲಗಳನ್ನು ಸೃಷ್ಠಿಸಿ ಗಲಭೆಗಳನ್ನು ಮಾಡುತ್ತಿದ್ದಾರೆ . ಮತಾಂತರಕ್ಕೂ ಮತ ಪ್ರಚಾರಕ್ಕೂ ಬಹಳ ವ್ಯತ್ಯಾಸಗಳಿವೆ . ಮತ ಪ್ರಚಾರ ಅವರವರ ವೈಯಕ್ತಿಕ ವಿಷಯ ಮತ ಪ್ರಚಾರವನ್ನು ಮತಾಂತರ ಎಂದು ಹೇಳಲು ಸಾಧ್ಯವಿಲ್ಲ . ಯಾರದೋ ಮನೆಯಲ್ಲಿ ಬರ್ತಡೆ ಪಾರ್ಟಿ ಅಥವಾ ಯಾವುದೋ ಶುಭ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾಗ , ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ನೀವು ಮತಾಂತರ ಮಾಡುತ್ತಿದ್ದೀರಾ ಎಂದು ಗಲಭೆ ಎಬ್ಬಿಸಿ ಕಾನೂನನ್ನು ಕೈಗೆ ತೆಗೆದುಕೊಂಡು ಅವರನ್ನು ಬೆದರಿಸಿ ಕೆಲವೊಂದು ಕಡೆ ಅವರನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ತಪ್ಪು ಮಾಹಿತಿ ನೀಡಿ ದೂರು ನೀಡುತ್ತಾರೆ . ಪೊಲೀಸರು ಇವರಿಗೆ ಹೆದರಿ ಯಾವುದೇ ವಿಚಾರಣೆ ಮಾಡದೆ ನಾನಾ ಸೆಕ್ಷನ್‌ಗಳನ್ನು ಹಾಕಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ .

Sneha Gowda

Recent Posts

ಫೇಲ್​ ಆದ ವಿದ್ಯಾರ್ಥಿಗಳೇ ಟೆನ್ಶನ್​ ಬೇಡ; ಮರು ಪರೀಕ್ಷೆಯ ದಿನಾಂಕ ಪ್ರಕಟ

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ,…

5 mins ago

ಪರೀಕ್ಷೆ ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದ ವಿದ್ಯಾರ್ಥಿ : ಪೋಷಕರ ಹುಡುಕಾಟ

ಇಂದು ರಾಜ್ಯದೆಲ್ಲಡೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾದ ಹಿನ್ನಲೆ ವಿದ್ಯಾರ್ಥಿನೋರ್ವ ಪರೀಕ್ಷೆ ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾಗಿದ್ದಾನೆ. ಘಟನೆ ಬೆಂ.ಗ್ರಾಮಾಂತರ ಜಿಲ್ಲೆ…

18 mins ago

ಮಧ್ಯರಾತ್ರಿ ಸ್ನೇಹಿತರ ಎಣ್ಣೆ ಪಾರ್ಟಿ : ಬಾಟಲಿಯಿಂದ ಹೊಡೆದು ಓರ್ವನ ಕೊಲೆ

ಬಾಟಲಿಯಿಂದ ಹೊಡೆದು ಯುವಕನೋರ್ವನ ಕೊಲೆ ಮಾಡಿರುವ ಘಟನೆ ಮುಂಡರಗಿ ತಾಲೂಕಿನ ಕೆಎಚ್​ಬಿ ಹೊಸ ಕಾಲೊನಿಯಲ್ಲಿ ನಡೆದಿದೆ.ಕೊಪ್ಪಳದ ಹೈದರ್ ತಾಂಡಾದ ನಿವಾಸಿ…

35 mins ago

ಪಾಕ್ ಬಂದರಿನಲ್ಲಿ ಉಗ್ರರ ದಾಳಿ; 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ವಾದರ್​ನಲ್ಲಿ ಉಗ್ರ ದಾಳಿ ನಡೆದಿದ್ದು 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

52 mins ago

ಬೋಯಿಂಗ್ ನ್ಯಾಷನಲ್ ಏರೋ ಮಾಡೆಲಿಂಗ್ ಸ್ಪರ್ಧೆ: ಎನ್ಎಂಎಎಂ ಇನ್ಸ್ಟಿಟ್ಯೂಟ್‌ಗೆ ಪ್ರಥಮ

ಭಾರತದ 855 ಸಂಸ್ಥೆಗಳ 2,350 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದ ಒಂಬತ್ತನೇ ವಾರ್ಷಿಕ ಬೋಯಿಂಗ್ ರಾಷ್ಟ್ರೀಯ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ…

53 mins ago

ಏರ್‌ ಇಂಡಿಯಾ 30 ಸಿಬ್ಬಂದಿಗಳ ವಜಾ : 74 ವಿಮಾನಗಳ ಹಾರಾಟ ರದ್ದು

ಸಾಮೂಹಿಕ ಅನಾರೋಗ್ಯದ ರಜೆ ತೆಗೆದುಕೊಂಡ ಏರ್‌ ಇಂಡಿಯಾದ 30 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ…

1 hour ago