ಬೆಂಗಳೂರು: ಕೋವಿಡ್-19 ಎರಡನೇ ಅಲೆಯು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯು ಭಾನುವಾರದಿಂದ ಲಸಿಕೆ ಕಾರ್ಯಕ್ರಮಕ್ಕೆ ತೀವ್ರತೆ ನೀಡಲು ನಿರ್ಧರಿಸಿದೆ.
ಬಿಬಿಎಂಪಿಯ ಯೋಜನೆಯ ಪ್ರಕಾರ ದಿನವೊಂದಕ್ಕೆ ಸುಮಾರು 50 ಸಾವಿರ ಜನರಿಗೆ ಲಸಿಕೆ ನೀಡುವುದಾಗಿದೆ. ಇದಕ್ಕಾಗಿ ಸುಮಾರು 300 ಲಸಿಕೆ ಕೇಂದ್ರಗಳನ್ನು ಇದಕ್ಕಾಗಿ ತೆರೆಯಲಾಗಿದೆ.
60 ವರ್ಷ ಮೇಲ್ಪಟ್ಟವರು ಮತ್ತು 45-60 ಹರೆಯದಲ್ಲಿ ಯಾವುದಾದರೂ ಅನಾರೋಗ್ಯದ ಸಮಸ್ಯೆಗಳು ಇದ್ದರೆ ಆಗ ಲಸಿಕೆ ನೀಡಲಾಗುತ್ತದೆ.