News Karnataka Kannada
Sunday, May 12 2024
ಬೆಂಗಳೂರು ನಗರ

ಕೋವಿಡ್‌: ರಾಜ್ಯದಲ್ಲಿ 2,154 ಹೊಸ ಪ್ರಕರಣಗಳು

Photo Credit :

ಕೋವಿಡ್‌: ರಾಜ್ಯದಲ್ಲಿ 2,154 ಹೊಸ ಪ್ರಕರಣಗಳು

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‍-19 ಸೋಂಕಿನ 2,154 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 8,60,082 ಕ್ಕೆ ತಲುಪಿದೆ.

ಅಲ್ಲದೆ, ಇದೇ ಅವಧಿಯಲ್ಲಿ 17 ಸೋಂಕಿತರು ಸಾವನ್ನಪ್ಪುವುದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 11,508 ಕ್ಕೆ ತಲುಪಿದೆ. ಬಳ್ಳಾರಿ 2, ಬೆಂಗಳೂರು ನಗರ 9, ದಕ್ಷಿಣ ಕನ್ನಡ 1, ಧಾರವಾಡ 1, ಹಾಸನ 1, ಮಂಡ್ಯ 1, ತುಮಕೂರು 2 ಮೃತಪಟ್ಟಿರುವುದು ವರದಿಯಾಗಿದ್ದು, ಮತ್ಯಾವುದೇ ಜಿಲ್ಲೆಗಳಲ್ಲಿ ಇಂದು ಸಾವು ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಬುಲೆಟಿನ್‍ನಲ್ಲಿ ಮಾಹಿತಿ ನೀಡಲಾಗಿದೆ.

ರಾಜ್ಯಾದ್ಯಂತ ಕಳೆದ 24 ಗಂಟೆಗಳಲ್ಲಿ 2,198 ಕೊರೋನಾವೈರಸ್ ಸೋಂಕಿತರು ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ರಾಜ್ಯದಲ್ಲಿ 27,965 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 8, ಬಳ್ಳಾರಿ 34, ಬೆಳಗಾವಿ 51, ಬೆಂಗಳೂರು ಗ್ರಾಮಾಂತರ 60, ಬೆಂಗಳೂರು ನಗರ 1,195, ಬೀದರ್ 3, ಚಾಮರಾಜನಗರ 14, ಚಿಕ್ಕಬಳ್ಳಾಪುರ 21, ಚಿಕ್ಕಮಗಳೂರು 17, ಚಿತ್ರದುರ್ಗ 24, ದಕ್ಷಿಣ ಕನ್ನಡ 40, ದಾವಣಗೆರೆ 29, ಧಾರವಾಡ 12, ಗದಗ 11, ಹಾಸನ 103, ಹಾವೇರಿ 20, ಕಲಬುರಗಿ 15, ಕೊಡಗು 20, ಕೋಲಾರ 39, ಕೊಪ್ಪಳ 13, ಮಂಡ್ಯ 46, ಮೈಸೂರು 137, ರಾಯಚೂರು 19, ರಾಮನಗರ 11, ಶಿವಮೊಗ್ಗ 38, ತುಮಕೂರು 61, ಉಡುಪಿ 27, ಉತ್ತರ ಕನ್ನಡ 42, ವಿಜಯಪುರ 33 ಮತ್ತು ಯಾದಗಿರಿಯಲ್ಲಿ 11 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು