News Karnataka Kannada
Wednesday, May 01 2024
ಬೆಂಗಳೂರು ನಗರ

ಒಂದು ಡೋಸ್ ಲಸಿಕೆಯನ್ನಾದರು ಪಡೆದುಕೊಳ್ಳಿ

Covid Vaccine
Photo Credit :

ಬೆಂಗಳೂರು :ವೈದ್ಯಕೀಯ ಕ್ಷೇತ್ರದಲ್ಲಿ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಚರ್ಚೆಗಳಾಚೆಗೆ ಪರಿಣಾಮಕಾರಿತ್ವಕ್ಕಿಂತ, ಲಸಿಕೆ ಪಡೆಯದೇ ಇರುವುದಕ್ಕಿಂತಲೂ ಯಾವುದಾದರೂ ಲಸಿಕೆ ಪಡೆಯುವುದು ಒಳಿತು ಎನ್ನುತ್ತಿದ್ದಾರೆ ವೈದ್ಯರು.
ಈ ವಿಷಯದಲ್ಲಿ ರಿಯಲ್ ವರ್ಲ್ಡ್ ಡೇಟಾ ಇನ್ನೂ ಅಲಭ್ಯವಾಗಿವೆ. ಪರಿಣಾಮಕಾರಿತ್ವದಲ್ಲಿ ಲಸಿಕೆಗಳ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ರೋಗದ ತೀವ್ರತೆ, ಸಾವಿನ ಪ್ರಮಾಣ, ಆಸ್ಪತ್ರೆಗೆ ದಾಖಲಾಗುವುದನ್ನು ಪರಿಗಣಿಸಿದರೆ ಎರಡು ಡೋಸ್ ಗಳ ನಂತರವೇ ಲಸಿಕೆ ಪರಿಣಾಮಕಾರಿಯಾಗಿರುತ್ತದೆ.
ಲಸಿಕೆ ಸಂಸ್ಥೆಗಳು ಕೊರೊನಾದ ಹೊಸ ತಳಿಗಳ ವಿರುದ್ಧವೂ ಈಗಿರುವ ಲಸಿಕೆಗಳು ಪರಿಣಾಮಕಾರಿ ಎಂದು ಹೇಳಿದರೂ ಕೊರೊನಾ ಹೊಸ ತಳಿಗಳ ಬಗ್ಗೆ ಅಧ್ಯಯನ ಸೀಮಿತವಾಗಿದೆ.
ಒಂದು ಡೋಸ್ ತೆಗೆದುಕೊಂಡವರಿಗೆ ಸೋಂಕು ಹರಡಿದರೂ ಕಡಿಮೆ ಆಕ್ಸಿಜನ್ ಪೂರೈಕೆ, ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈಜ್ಞಾನಿಕ ಮಂಡಳಿ ಮತ್ತು ಅಧ್ಯಕ್ಷ-ಜೆರಿಯಾಟ್ರಿಕ್ ಮೆಡಿಸಿನ್, ಮಣಿಪಾಲ್ ಆಸ್ಪತ್ರೆಗಳ ಮುಖ್ಯಸ್ಥ, ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ತಂಡದ ಸದಸ್ಯ ಡಾ. ಅನೂಪ್ ಅಮರ್ ನಾಥ್ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ಹೇಳಿದ್ದಾರೆ. ಭಾರತದ ಅಧ್ಯಯನದ ಪ್ರಕಾರ, ಈ ಎರಡು ಲಸಿಕೆಯ ಪರಿಣಾಮಕಾರಿತ್ವ ಒಂದೇ ರೀತಿಯಲ್ಲಿದ್ದರೂ ಕೋವಿಶೀಲ್ಡ್ ಗಿಂತಲೂ ಕೋವ್ಯಾಕ್ಸಿನ್ ಉತ್ತಮವಾಗಿದೆ. ಹಲವು ದೇಶಗಳಲ್ಲಿ ಕೋವಿಶೀಲ್ಡ್ ಲಸಿಕೆಗೆ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳುತ್ತಿರುವವರು ಹೆಚ್ಚಾಗಿ ಕೋವಿಶೀಲ್ಡ್ ನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಇಂಟರ್ನಲ್ ಮೆಡಿಸಿನ್ ಮತ್ತು ಡಯಾಬಿಟಾಲಜಿ, ಸಕ್ರ ವರ್ಲ್ಡ್ ಆಸ್ಪತ್ರೆ ಡಾ. ಸುಬ್ರತಾ ದಾಸ್.
ರಕ್ತ ಹೆಪ್ಪುಗಟ್ಟುವ ಸಮಸ್ಯೆ (ಥ್ರೊಂಬೊಸಿಸ್) ಇರುವವರು, ಸ್ಟ್ರೋಕ್, ಹೃದಯ ಸಮಸ್ಯೆ ಇರುವವರು ಕೋವಿಶೀಲ್ಡೇತರ ಲಸಿಕೆಯನ್ನು ಪಡೆಯುವುದು ಸೂಕ್ತವಾಗಿದೆ. ಲಸಿಕೆ ಪಡೆದ ನಂತರ ಪ್ರತಿಕಾಯಗಳ ಪರಿಶೀಲನೆ ನಡೆಸಲಾಗಿಲ್ಲ. ಕೆಲವೊಂದು ಲಸಿಕೆಗಳು ಟಿ-ಸೆಲ್ ಇಮ್ಯುನಿಟಿ (ರೋಗನಿರೋಧಕತೆಯ ಪ್ರತಿಕ್ರಿಯೆಯ ದೀರ್ಘಾವಧಿ ಮೆಮೊರಿ)ಯನ್ನು ಉತ್ಪಾದಿಸುತ್ತವೆ.
ಇನ್ನು ರಷ್ಯಾದ ಅಧ್ಯಯನದ ಪ್ರಕಾರ ಸ್ಪುಟ್ನಿಕ್ ಲಸಿಕೆ ಶೇ.90 ರಷ್ಟು ಪರಿಣಾಮಕಾರಿತ್ವವವನ್ನು ಹೊಂದಿದೆ ಎಂದು ಡಾ.ಸುಬ್ರತಾ ದಾಸ್ ಹೇಳಿದ್ದಾರೆ. ಲಸಿಕೆಗಳು ಕಾರ್ಯನಿರ್ವಹಣೆಯಲ್ಲಿ ವಿವಿಧ ವಿಧಾನಗಳನ್ನು ಒಳಗೊಂಡಿದ್ದರೂ ಅವುಗಳ ಅಂತಿಮ ಗುರಿ ಮಾತ್ರ ರೋಗನಿರೋಧಕತೆ ಹೆಚ್ಚಿಸುವುದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 100% ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡುವ ಯೋಜನೆಯನ್ನು ಬಿಬಿಎಂಪಿ ಹಮ್ಮಿಕೊಂಡಿದೆ. ಮುಂದಿನ 45 ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನವನ್ನು ವೇಗಗೊಳಿಸಲು ಹಾಗೂ 100% ಮೊದಲ ಡೋಸ್ ಲಸಿಕೆ ಗುರಿಯನ್ನು ಸಾಧಿಸಲು ಕ್ರಿಯಾಯೋಜನೆ ಹೊರತಂದಿದೆ. ತನ್ನ ವ್ಯಾಪ್ತಿಯ ಶೇ 100ರಷ್ಟು ಮಂದಿಗೆ ಕೊರೊನಾ ಮೊದಲ ಡೋಸ್ ಲಸಿಕೆ ನೀಡಲು ಬಿಬಿಎಂಪಿ ಗುರಿ ಹೊಂದಿರುವುದಾಗಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು