ಬೆಂಗಳೂರು: ನಗರದ ವಿವಿಧೆಡೆ ಹೆಲ್ಮೆಟ್ ಮಾರಾಟದ ಅಂಗಡಿ, ಸ್ಥಳಗಳಿಗೆ ಭೇಟಿ ನೀಡಿದ ಸಂಚಾರ ಪೊಲೀಸರು, ಐಎಸ್ಐ ಗುರುತು ಇಲ್ಲದ ಹೆಲ್ಮೆಟ್ಗಳನ್ನು ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.
ಫೆಬ್ರುವರಿ 1ರಿಂದ ನಗರದಲ್ಲಿ ‘ಆಪರೇಷನ್ ಸೇಫ್ ರೈಡ್’ ಕಾರ್ಯಾಚರಣೆ ಶುರುವಾಗಲಿದ್ದು ಈ ನಿಟ್ಟಿನಲ್ಲಿ ಬೈಕ್ ಸವಾರರು ಐಎಸ್ಐ ಗುರುತು ಇರುವ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕಿದೆ. ಹಾಗಾಗಿ ಕಳಪೆ ಹೆಲ್ಮೆಟ್ಗಳ ಮಾರಾಟ ತಡೆಯುವಂತೆ ಹೆಚ್ಚುವರಿ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ, ಹೆಲ್ಮೆಟ್ ಮಾರಾಟ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಸುವಂತೆ ಆಯಾ ಠಾಣೆಯ ಇನ್ಸ್ಪೆಕ್ಟರ್ಗಳಿಗೆ ಸೂಚನೆ ನೀಡಿದ್ದರು.