ಉಕ್ರೇನ್‌ನಲ್ಲಿ ಸಿಲುಕಿದ ʼಹಾಸನ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ ಕೆ.ಗೋಪಾಲಯ್ಯʼ

ಬೆಂಗಳೂರು : ಇಂದು ಮುಂಜಾನೆ ವಿಡಿಯೋ ಕರೆ ಮೂಲಕ ಯುದ್ದ ಪೀಡಿತ ಯುಕ್ರೇನ್ ನಲ್ಲಿ ಸಿಲುಕಿರುವ ಹಾಸನ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ  ಮಾತನಾಡಿ ಧೈರ್ಯ ತುಂಬಿದರು.

ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಯುಕ್ರೇನ್ ನಲ್ಲಿರುವ ವಿದ್ಯಾರ್ಥಿಗಳು ಮತ್ತು ಭಾರತೀಯ ನಾಗರೀಕರನ್ನು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸುರಕ್ಷಿತವಾಗಿಕರೆ ತಂದಿದೆ. ಉಳಿದವರನ್ನು ಕರೆತರುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ನಿಮ್ಮನ್ನು ಕೂಡ ಶೀಘ್ರವೇ ಕರೆ ತರಲು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಮೂಲತಃ ಹಾಸನ ಜಿಲ್ಲೆಯ ಬೆಂಗಳೂರಿನ ನಿವಾಸಿ ಪೂರ್ಣ ಅವರೊಂದಿಗೆ ಹದಿನೈದು ನಿಮಿಷಕ್ಕೆ ಹೆಚ್ಚು ಕಾಲ ಮಾತನಾಡಿದ ಸಚಿವರು ಎಂಥಹುದೆ ಸಂದರ್ಭ ಬಂದರೂ ಧೈರ್ಯಗೆಡದೆ ಆತ್ಮ ಸ್ಥೈರ್ಯ ದಿಂದ‌ ಎದುರಿಸಲು ಸಲಹೆ ನೀಡಿದರು.

ಯುದ್ಧ ಪೀಡಿತ ನಗರದಲ್ಲಿ ನೀರು, ಆಹಾರ, ರಕ್ಷಣೆ ಇತರೆ ಮೂಲಭೂತ ಸೌಕರ್ಯಗಳ ಲಭ್ಯತೆ ಕುರಿತು ಮಾಹಿತಿ ಪಡೆದ ಸಚಿವರು, ಅವಕಾಶ ಸಿಕ್ಕಾಗ ಸಾಧ್ಯವಾದಷ್ಟು ಹೆಚ್ಚು ನೀರು ಮತ್ತು ಆಹಾರ ಪದಾರ್ಥಗಳನ್ನು‌ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ತಿಳಿಸಿದರಲ್ಲದೆ ಯಾವುದೇ ಸಮದಲ್ಲಾದರೂ ಕೂಡ‌ ತಮ್ಮ‌ದೂರವಾಣಿ ಸಂಖ್ಯೆಗೆ ಕರೆ ಮಾಡಲು ತಿಳಿಸಿದರು.

ಇದೇ ವೇಳೆ ಬೆಳಗಾವಿ ಜಿಲ್ಲೆಯ ಅಥಣಿಯ ರಕ್ಷಿತ್ ಎಂಬ ವಿದ್ಯಾರ್ಥಿಯೊಂದಿಗೂ ಕೂಡ ಮಾತನಾಡಿದ ಸಚಿವರು ನಿಮ್ಮ ಜೊತೆಯಲ್ಲಿರುವ ಎಲ್ಲರಿಗೂ ಧೈರ್ಯ ದಿಂದ ಇರಲು ತಿಳಿಸಿದರು.ಬೆಂಗಳೂರಿನ ಮಾಗಡಿ ರಸ್ತೆಯ ಕಾರ್ತಿಕ್ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ವಿದ್ಯಾರ್ಥಿಗಳ ಜೊತೆ ಮಾತನಾಡಿದರು.

Swathi MG

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

6 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

6 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

6 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

7 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

7 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

7 hours ago