ಬೆಂಗಳೂರು: ರಾಜ್ಯಾದ್ಯಂತ ಫೆ. 27ರಂದು ರಾಷ್ಟ್ರೀಯ ಲಸಿಕೆ ದಿನವನ್ನು ಹಮ್ಮಿಕೊಂಡಿದ್ದು, 5 ವರ್ಷದೊಳಗಿನ 64.77ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ವಿತರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ರಾಜ್ಯಾದ್ಯಂತ 33,223 ಬೂತ್ಗಳಲ್ಲಿ, 45,933 ತಂಡಗಳು ಮನೆ ಮನೆಗೆ ಭೇಟಿ ನೀಡಿ, 960 ಸಂಚಾರಿ ತಂಡ, 1,942 ಟ್ರಾನ್ಸಿಟ್ ತಂಡಗಳು, 1,08,881 ಲಸಿಕಾ ಕಾರ್ಯಕರ್ತರು, 7,138 ಮೇಲ್ವಿಚಾರಕರು ಪಲ್ಸ್ ಪೋಲಿಯೋ ವಿತರಣೆಯಲ್ಲಿ ಭಾಗಿಯಾಗಲಿದ್ದಾರೆ.